ಕರ್ನಾಟಕ

ಬೆಂಗಳೂರಿನಲ್ಲಿ ಇಂಡಿಗೋ ವಿಮಾನಗಳ ಮುಖಾಮುಖಿ; ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

Pinterest LinkedIn Tumblr

ನವದೆಹಲಿ: ಆಗಸದಲ್ಲಿ ವಿಮಾನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಬೇಕಾದ ದೊಡ್ಡ ದುರಂತವೊಂದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಜು.10 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜು.10 ರಂದು ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಇಂಡಿಯೋ ವಿಮಾನವೊಂದು ಹೊರಟಿತ್ತು. ಇದೇ ವೇಳೆಗೆ ಹೈದರಾಬಾದ್’ನಿಂದ ಕೊಯಿಮತ್ತೂರಿಗೆ ಮತ್ತೊಂದು ಇಂಡಿಗೋ ವಿಮಾನ ಕೂಡ ಹೊರಟಿತ್ತು.

ಬೆಂಗಳೂರಿನ ವಾಯುಮಾರ್ಗ ಪ್ರದೇಶದ ವ್ಯಾಪ್ತಿಯಲ್ಲಿ 2 ವಿಮಾನಗಳು ಪರಸ್ಪರ ಎದುರಾಗಿ ಕೇವಲ 4 ಮೈಲಿ ಅಂತರದಲ್ಲಿದ್ದ ಸಂದರ್ಭದಲ್ಲಿ ಮುಖಾಮುಖಿ ಡಿಕ್ಕಿ ಹೊಡೆಯುವ ಕುರಿತಂತೆ ಎಟಿಸಿ ಸಿಸ್ಟಂ ಅಪಾಯದ ಸಂದೇಶವನ್ನು ರವಾನಿಸಿದೆ.

ಈ ವೇಳೆ ಎಚ್ಚೆತ್ತ ಎರಡೂ ವಿಮಾನಗಳು ಅಂತರವನ್ನು ದೂರ ಮಾಡಿಕೊಂಡು ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪುವಂತೆ ಮಾಡಿವೆ.

ಹೈದರಾಬಾದ್ ನಿಂದ ಹೊರಟಿದ್ದ ವಿಮಾನ 36 ಸಾವಿರ ಅಡಿ ಎತ್ತರದಲ್ಲಿ, ಬೆಂಗಳೂರಿನಲ್ಲಿ ಹೊರಟಿದ್ದ ವಿಮಾನ 28 ಸಾವಿರ ಅಡಿ ಎತ್ತರದಲ್ಲಿ ಹಾರಾಡಲಿ ಎಂದು ಎಟಿಸಿ ಅವಕಾಶ ನೀಡಿತ್ತು. ಆದರೆ, ಎರಡೂ ವಿಮಾನಗಳು ಕ್ರಮೇ 27300 ಅಡಿ ಎತ್ತರಕ್ಕೆ ಇಳಿದಿದ್ದರಿಂದ ಕೇವಲ 200 ಮೀಟರ್ ಅಂತರದಲ್ಲಿ ಹಾರಾಟ ನಡೆಸಿದ್ದರಿಂದ ಅಪಾಯ ಎದುರಾಗಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ಏರ್ ಟ್ರಾಫಿಕ್ ಕಂಟ್ರೋಲ್ ಸ್ಪಷ್ಟನೆ ನೀಡಿದ್ದು, ಹೈದರಾಬಾದ್-ಕೊಯಿಮತ್ತೂರ್ ಮತ್ತು ಬೆಂಗಳೂರು-ಕೊಚ್ಚಿ ವಿಮಾನಗಳು ಪರಸ್ಪರ ಎದುರಾಗುತ್ತಿತ್ತು. ಈ ವೇಳೆ ಕೂಡಲೇ ಎಚ್ಚೆತ್ತುಕೊಂಡು ಸಂದೇಶ ರವಾನಿಸಲಾಗಿತ್ತು ಎಂದು ತಿಳಿಸಿದೆ.

Comments are closed.