ಕರ್ನಾಟಕ

ಫ್ಲ್ಯಾಟ್​ನ ಬಾತ್​ರೂಂನಲ್ಲಿ ಟೆಕ್ಕಿ ದಂಪತಿ ಶವ ಪತ್ತೆ

Pinterest LinkedIn Tumblr


ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಫ್ಲ್ಯಾಟ್​ನ ಬಾತ್​ರೂಂನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಮತ್ತು ಅವರ ಪತ್ನಿಯ ಶವ ಪತ್ತೆಯಾಗಿದೆ.

ಟೆಕ್ಕಿ ಮಹೇಶ್​ (35) ಮತ್ತು ಅವರ ಪತ್ನಿ ಶೀಲಾ (30) ಮೃತ ದುರ್ದೈವಿಗಳು. ಬಾತ್​ರೂಂನಲ್ಲಿದ್ದ ಗ್ಯಾಸ್​ ಗೀಸರ್​ನಿಂದ ಕಾರ್ಬನ್​ ಮೋನಾಕ್ಸೈಡ್​ ವಿಷಾನಿಲ ಸೋರಿಕೆಯಾಗಿ ದಂಪತಿ ಮೃತಪಟ್ಟಿರುವ ಶಂಕೆ ಇದೆ ಪೊಲೀಸರು ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್​ಮೆಂಟ್​ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ ದಂಪತಿಯ ಮಗಳು ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಬೆಳಗ್ಗೆ ಮಕ್ಕಳು ಶಾಲೆಗೆ ತೆರಳಿದ ನಂತರ ದಂಪತಿ ಸ್ನಾನಕ್ಕೆ ತೆರಳಿದ್ದಾಗ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಮಹೇಶ್​ ಮೂಲತಃ ಬೆಳಗಾವಿಯ ಅಥಣಿ ತಾಲೂಕಿನ ನಿವಾಸಿ. 7 ವರ್ಷಗಳ ಹಿಂದೆ ಶೀಲಾ ಜತೆ ಅವರಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಹೇಶ್​ ವೈಟ್​​ಫೀಲ್ಟ್​ ಹತ್ತಿರ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಮಕ್ಕಳ ಜತೆ ಶಿವಗಂಗಾ ಅಪಾರ್ಟ್​ಮೆಂಟ್​ನ ಮೊದಲ ಮಹಡಿಯ ಫ್ಲ್ಯಾಟ್​ನಲ್ಲಿ ನೆಲೆಸಿದ್ದರು.

Comments are closed.