
ಚಿಯಾಂಗ್ ರೈ: 17 ದಿನಗಳು ಕಗ್ಗತ್ತಲ ಗುಹೆಯಲ್ಲಿ ಕಳೆದಿದ್ದ ಬಳಕರು ರಕ್ಷಣೆ ಹೊಂದಿದ ಬಳಿಕ ಆಸ್ಪತ್ರೆಯಲ್ಲಿರುವ ಮೊದಲ ವಿಡಿಯೋ ಇಂದು ಬಿಡುಗಡೆಗೊಂಡಿದೆ. ವಿಡಿಯೋದಲ್ಲಿ ಬಾಲಕರು ನಗುತ್ತಾ ನಮಸ್ಕಾರ ಮಾಡುತ್ತಿರುವ ಜತೆಗೆ ಸಂತಸ ವ್ಯಕ್ತಪಡಿಸುತ್ತಿರುವುದು ದಾಖಲಾಗಿದೆ.
ಮ್ಯಾನ್ಮಾರ್ ಬಾರ್ಡರ್ ಗೆ ತಾಗಿಗೊಂಡಂತಿರುವ ಥಾಯ್ಲಾಂಡ್ನ ಗುಹೆಗೆ ಟ್ರಕ್ಕಿಂಗ್ ಗೆ ಹೋಗಿದ್ದ ಕಿರಿಯರ ಫುಟ್ಬಾಲ್ ತಂಡದ 12 ಮಂದಿ ಬಾಲಕರು ಹಾಗೂ ಒಬ್ಬ ಕೋಚ್ ಪ್ರವಾಹಕ್ಕೆ ತುತ್ತಾಗಿ ಹೊರಬರಲಾರದೇ ಬಾಕಿಯಾಗಿದ್ದರು. ಸತತ 17 ದಿನಗಳ ಬಳಿಕದ ಕರ್ಯಾಚರಣೆ ಬಳಿಕ ಅವರನ್ನು ರಕ್ಷಣೆ ಮಾಡಲಾಗಿತ್ತು. ಈಗ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಕರ್ಯಾಚರಣೆಯ ಮುಖ್ಯಸ್ಥ ನರೋಂಗ್ಸಾಕ್ ಒಸಂಟೋಕ್ರೋನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವರು ಸಣ್ಣ ಬಾಲಕರಾಗಿದ್ದು, ಗುಹೆಯೊಳಗೆ ಹೋಗಿ ದಾರಿ ಕಾಣದೆ ಬಾಕಿಯಾಗಿದ್ದರು. ಈ ಘಟನೆಗೆ ಯಾರನ್ನು ದೂಷಿಸಿಯೂ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.
ನಾನು ಇದು ಮಕ್ಕಳ ತಪ್ಪು ಎಂದು ಹೇಳುತ್ತಿಲ್ಲ. ಹಾಗೂ ಅವರನ್ನು ಹೀರೋಗಳಾಗಿ ಬಿಂಬಿಸುವುದೂ ಕೂಡ ಇಲ್ಲ. ಅವರು ಸಣ್ಣ ಮಕ್ಕಳಾಗಿದ್ದು,ಇದೊಂದು ಪ್ರಮಾದದಿಂದ ಆದ ಘಟನೆ ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಬಾಳಕರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಆಸ್ಪತ್ರೆಯ ಬೆಡ್ನಲ್ಲಿ ಮಲಗಿಕೊಂಡಿದ್ಧಾರೆ. ಕೆಲವರು ಬೆಡ್ ನಲ್ಲಿ ಕುಳಿತಿದ್ದು, ಕೆಲವರು ಕ್ಯಾಮೆರಾ ಕಂಡು ವಿಜಯದ ಸಂಕೇತ ತೋರಿದ್ದಾರೆ. ಆದರೆ ಯರೂ ಮತನಾಡುತ್ತಿರುವುದು ದಾಖಲಾಗಿಲ್ಲ. ಹನ್ನೆರಡು ಬಾಲಕರು 17 ದಿನಗಳಲ್ಲಿ ಸರಾಸರಿ ಎರಡು ಕೆಜಿಗಳಷ್ಟು ತೂಕ ಕಳೆದುಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
Comments are closed.