ಕರ್ನಾಟಕ

ಹಾವೇರಿಯಲ್ಲಿ ಜಾವಲಿನ್ ಥ್ರೋ ವೇಳೆ ಕುತ್ತಿಗೆಗೆ ಜಾವಲಿನ್ ತುದಿ ಚುಚ್ಚಿ ವಿದ್ಯಾರ್ಥಿ ಸಾವು

Pinterest LinkedIn Tumblr

ಹಾವೇರಿ: ಶಾಲೆಯಲ್ಲಿ ಜಾವಲಿನ್ ಥ್ರೋ (ಈಟಿ ಎಸೆತ) ಆಡುವಾಗ ಜಾವಲಿನ್ ತುದಿ ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಲ್ಲಿಕ್​ (16) ಮೃತ ದುರ್ದೈವಿ.

ಮಂಗಳವಾರ ಶಾಲೆಯಲ್ಲಿ ಜಾವಲಿನ್ ಥ್ರೋ ಆಡುವಾಗ ವಿದ್ಯಾರ್ಥಿಯೊಬ್ಬ ಎಸೆದಿದ್ದ ಈಟಿ ಮಲ್ಲಿಕ್ ಕುತ್ತಿಗೆಗೆ ಚುಚ್ಚಿಕೊಂಡಿತ್ತು. ಆ ತಕ್ಷಣ ಮಲ್ಲಿಕ್ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಲ್ಲಿಕ್ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯ ಸಾವಿನ ಕಾರಣ ಶಾಲೆಯನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments are closed.