ಕರ್ನಾಟಕ

ಬೆಂಗಳೂರಿನಲ್ಲಿ ಭಾಷಾ ಸಮಸ್ಯೆಯಿಂದ 40,.000ರ ಕಳೆದುಕೊಂಡ ತಿರುಪತಿ ಆಂಧ್ರ ವ್ಯಕ್ತಿ!

Pinterest LinkedIn Tumblr


ಬೆಂಗಳೂರು: ಆಂಧ್ರ ಪ್ರದೇಶದ ತಿರುಪತಿಯಿಂದ ನಗರಕ್ಕೆ ಹೂವು ಕೊಳ್ಳಲು ಬಂದ 26 ವರ್ಷದ ವ್ಯಕ್ತಿ ದೊಡ್ಡ ಸಮಸ್ಯೆಗೆ ಈಡಾಗಿದ್ದಾನೆ. ಭಾಷಾ ಸಮಸ್ಯೆಯಿಂದಾಗಿ ತಿರುಪತಿ ಮೂಲದ ವ್ಯಕ್ತಿ 40 ಸಾವಿರ ಹಣ ಕಳೆದುಕೊಂಡಿದ್ದಲ್ಲದೆ, ಈತನನ್ನೇ ಕ್ರಿಮಿನಲ್ ಎಂದು ತಪ್ಪು ತಿಳಿದುಕೊಂಡ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಬಳಿಕ ಪೊಲೀಸ್ ಠಾಣೆಗೆ ಈತನನ್ನು ಕರೆದೊಯ್ಯಲಾಗಿದ್ದು, ತೆಲುಗು ಮಾತನಾಡುವ ಪೊಲೀಸರಿದ್ದ ಕಾರಣ ಸತ್ಯ ಬೆಳಕಿಗೆ ಬಂದಿದೆ. ಬಳಿಕ, ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರಿದ್ದ ಗ್ಯಾಂಗ್‌ ಪೈಕಿ ಒಬ್ಬ ವ್ಯಕ್ತಿಯನ್ನು ತಿರುಪತಿ ಮೂಲದ ಚಿಟ್ಟಿಬಾಬು ಹಿಡಿದು ಹಾಕಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆ ಡೆಕೋರೇಷನ್‌ಗೆಂದು 40 ಸಾವಿರ ಹಣ ಕೊಟ್ಟು ಬೆಂಗಳೂರಿಗೆ ನನ್ನನ್ನು ಕಳಿಸಲಾಗಿತ್ತು. ಸೋಮವಾರ ಮಧ್ಯಾಹ್ನ ಮೆಜೆಸ್ಟಿಕ್‌ಗೆ ಬಂದಿಳಿದ ನನ್ನನ್ನು ಸಿಟಿ ಮಾರುಕಟ್ಟೆಗೆ ಡ್ರಾಪ್ ಮಾಡುವುದಾಗಿ ಆಟೋದಲ್ಲಿದ್ದ ಮಹಿಳೆಯೊಬ್ಬರು ಹೇಳಿದರು. ಅಲ್ಲದೆ, ನಾನು ಆಟೋ ಹತ್ತಿದಾಗ ಒಬ್ಬರು ಮಹಿಳೆ ಇದ್ದರು. ಬಳಿಕ, ನಾನು ಹತ್ತಿದ ಮೇಲೆ ಇನ್ನೊಬ್ಬ ಮಹಿಳೆ ಸಹ ಹತ್ತಿದರು. ಬಳಿಕ ಸ್ವಲ್ಪ ದೂರ ಹೋದ ಬಳಿಕ ಮತ್ತೊಬ್ಬ ಪುರುಷ ಆಟೋ ಹತ್ತಿದರು ಎಂದು ತಿರುಪತಿ ಮೂಲದ ವ್ಯಕ್ತಿ ವಿಜಯ ಕರ್ನಾಟಕ ಸೋದರ ಪತ್ರಿಕೆ ಬೆಂಗಳೂರು ಮಿರರ್‌ಗೆ ಮಾಹಿತಿ ನೀಡಿದ್ದಾನೆ.

ಬಳಿಕ, ಮತ್ತೊಂದು ಆಟೋ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿತು. ಅಲ್ಲದೆ, ಓಕಳೀಪುರಂನ ಶನೇಶ್ವರ ಸ್ವಾಮಿ ದೇವಾಲಯದ ಬಳಿ ಆಟೋವನ್ನು ತಡೆದರು. ಈ ವೇಳೆ ತಾನು ತೊಂದರೆಯಲ್ಲಿ ಸಿಲುಕಿರುವುದು ನನ್ನ ಗಮನಕ್ಕೆ ಬಂದಿದೆ ಎಂದೂ ವ್ಯಕ್ತಿ ಹೇಳಿದ್ದು, ಬಳಿಕ ನನ್ನ ಮೇಲೆ ಹಲ್ಲೆ ಮಾಡಿದ ಮಹಿಳೆ ಚಾಕು ತೋರಿಸಿ ಬೆದರಿಸಿ ತನ್ನ ಬಳಿಯಿದ್ದ 40 ಸಾವಿರ ಹಣ ಕಸಿದುಕೊಂಡರು. ನಂತರ ನಾನು ಅವರನ್ನು ಚೇಸ್ ಮಾಡಿ ಒಬ್ಬ ಕಳ್ಳನನ್ನು ಹಿಡಿಯುವಲ್ಲಿ ಸಫಲನಾದೆ. ಆದರೆ, ಪೊಲೀಸರು ಇದನ್ನು ನೋಡಿ ನನ್ನನ್ನು ಹಿಡಿದು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದೂ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ವೇಳೆ ಅದೃಷ್ಟವಶಾತ್ ತೆಲುಗು ಅರ್ಥವಾಗುವ ಪೊಲೀಸರೊಬ್ಬರು ನನ್ನ ಭಾಷೆ ಅರ್ಥ ಮಾಡಿಕೊಂಡ ಬಳಿಕ ಸತ್ಯ ಬೆಳಕಿಗೆ ಬಂದಿದೆ. ಆ ಕಳ್ಳರೆಲ್ಲರೂ 26 ರಿಂದ 30 ವರ್ಷ ವಯಸ್ಸಿನವರು ಎಂದು ಚಿಟ್ಟಿಬಾಬು ಹೇಳಿದ್ದಾರೆ.

ಅಲ್ಲದೆ, ನಾನು ಸತ್ಯ ಹೇಳುತ್ತಿದ್ದೇನೆ ಎಂದು ತಿಳಿಯಲು ತನಗೆ ಹಣ ನೀಡಿದ ಮಾಲೀಕರಿಗೆ ಕರೆ ಮಾಡಲಾಗಿತ್ತು. ಬಳಿಕ ಐವರು ಕಳ್ಳರು ಹಣ ಹಂಚಿಕೊಂಡಿದ್ದರಿಂದಾಗಿ ನನಗೆ ಒಬ್ಬ ಕಳ್ಳನ ಮೂಲಕ 8 ಸಾವಿರ ಹಣ ಮರಳಿ ದೊರೆತಿದೆ. ಈ ಹಣದ ಮೂಲಕ ಸ್ವಲ್ಪ ಹೂವುಗಳನ್ನು ತೆಗೆದುಕೊಂಡು ನಾನು ತಿರುಪತಿಗೆ ವಾಪಸ್ ಮರಳಿದೆ ಎಂದು ಚಿಟ್ಟಿಬಾಬು ವಿಜಯ ಕರ್ನಾಟಕ ಸೋದರ ಪತ್ರಿಕೆ ಬೆಂಗಳೂರು ಮಿರರ್‌ಗೆ ಹೇಳಿಕೊಂಡಿದ್ದಾನೆ.

ಇನ್ನು, ಈ ಪ್ರಕರಣದ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಜತೆಗೆ ತಪ್ಪಿಸಿಕೊಂಡಿರುವ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಅಡಗಿರುವ ಸ್ಥಳದ ಬಗ್ಗೆ ಪತ್ತೆ ಹಚ್ಚಿದ್ದೇವೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಮಾಧ್ಯಮಗಳಿಗೆ ಹೇಳಿದ್ದಾರೆ.

Comments are closed.