ಕರ್ನಾಟಕ

ಕೌಟುಂಬಿಕ ಕಲಹ: ಹೆಂಡತಿಯ ಬೆತ್ತಲೆ ಫೋಟೊ ತೆಗೆದು ಬ್ಲ್ಯಾಕ್‌ಮೇಲ್‌

Pinterest LinkedIn Tumblr


ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ವಿರುದ್ಧ ಬ್ಲ್ಯಾಕ್‌ಮೇಲ್‌ ಆರೋಪ ಹೊರಿಸಿ ಗಿರಿನಗರ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ನನಗೆ ಮದ್ಯಪಾನ ಮಾಡಿಸಿ, ಬಳಿಕ ಬೆತ್ತಲೆ ಫೋಟೋಗಳನ್ನು ತೆಗೆದುಕೊಂಡು ಈಗ ಅವುಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವುದಾಗಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ವರ್ಷದ ಹಿಂದೆ ದೂರು ನೀಡಿದ ಮಹಿಳೆ ಕೃಷ್ಣ ಮೂರ್ತಿ ಎಂಬುವರನ್ನು ವಿವಾಹವಾಗಿದ್ದರು. ಈ ವೇಳೆ ಮಹಿಳೆಯ ಪೋಷಕರು 400 ಗ್ರಾಂ ಚಿನ್ನ ಹಾಗೂ ನಾಲ್ಕು ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು. ಆದರೆ, ಮದುವದಯಾದ ಕೆಲವೇ ಸಮಯದಲ್ಲಿ ಮತ್ತಷ್ಟು ವರದಕ್ಷಿಣೆ ತರುವಂತೆ ಕೃಷ್ಣಮೂರ್ತಿ ಪತ್ನಿಗೆ ಒತ್ತಾಯಿಸುತ್ತಿದ್ದ. ಈ ವೇಳೆ ಅವರು ಪೊಲೀಸ್‌ ದೂರು ನೀಡುವುದಾಗಿ ಹೇಳಿದ್ದರು. ಅದಕ್ಕೆ ಹೆದರಿದ ಆರೋಪಿಯು, ಪತ್ನಿಗೆ ಮದ್ಯ ಕುಡಿಸಿ ನಶೆಯಲ್ಲಿರುವ ವೇಳೆ ಬೆತ್ತಲೆ ಮಾಡಿ ಫೋಟೋ ತೆಗೆದುಕೊಂಡು ಇಟ್ಟುಕೊಂಡಿದ್ದ. ಬಳಿಕ 10 ಲಕ್ಷ ರೂ. ವರದಕ್ಷಿಣೆ ತರಲೇಬೇಕು ಎಂದು ಒತ್ತಾಯಿಸಿದ್ದ. ಈ ವೇಳೆ ಪತ್ನಿ ಮತ್ತೆ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದರು. ಆಗ ತನ್ನ ಬಳಿ ಇರುವ ನಗ್ನ ಚಿತ್ರಗಳನ್ನು ತೋರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾನೆ. ಇದರಿಂದ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.

Comments are closed.