ರಾಷ್ಟ್ರೀಯ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ ಸಂತ್ರಸ್ತೆಗೆ ಮುಜುಗರದ ಪ್ರಶ್ನೆ!

Pinterest LinkedIn Tumblr


ಅಹಮದಾಬಾದ್: ಅತ್ಯಾಚಾರ ಸಂತ್ರಸ್ಥೆಗೆ ವಿಚಾರಣೆಯ ನೆಪದಲ್ಲಿ ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್‌ನ ವಿಶೇಷ ಪೊಲೀಸ್ ಆಯುಕ್ತ ಜೆ. ಕೆ. ಭಟ್‌ ವಿಚಿತ್ರ ಪ್ರಶ್ನೆಗಳನ್ನು ಕೇಳಿರುವುದಾಗಿ ಆರೋಪಿಸಲಾಗಿದೆ.

ದೂರು ನೀಡಲು ಅತ್ಯಾಚಾರ ಸಂತ್ರಸ್ತೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು ಆರೋಪಿಯ ಪರವಾಗಿ ಮಾತನಾಡಿದ್ದು ಅಲ್ಲದೆ, ಗುಪ್ತಾಂಗಕ್ಕೆ ಮರದ ತುಂಡು ತುರುಕಿದರೆ ಅದು ಅತ್ಯಾಚಾರವಾಗುವುದಿಲ್ಲ ಎಂದು ಹೇಳಿರುವುದಾಗಿ ಸಂತ್ರಸ್ತೆ ದೂರಿದ್ದಾರೆ.

ಸಂತ್ರಸ್ತೆ ಮತ್ತು ಆಕೆಯ ತಂದೆ ಸುದ್ದಿಗೋಷ್ಠಿ ನಡೆಸಿದ್ದು, ಸಿಟಿ ಕ್ರೈಂ ಬ್ರಾಂಚ್‌ನ ಪೊಲೀಸ್ ಆಯುಕ್ತರು ತೀರಾ ಮುಜುಗರವಾಗುವಂತಹ ರೀತಿಯ ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೆ ಕೇಳಿ ಒಂದು ಹಂತದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತು.

ಪೊಲೀಸರ ಪ್ರಶ್ನೆಗಳನ್ನು ಕೇಳಿದರೆ ಯಾರೇ ಆಗಲಿ ದೂರು ನೀಡಲು ಠಾಣೆಗೆ ಬರಲಾರರು. ಯಾಕೆಂದರೆ ಉತ್ತರಿಸಲು ಸಾಧ್ಯವಾಗದ ಮತ್ತು ನಮ್ಮದೇ ತಪ್ಪು ಎಂದು ಬಿಂಬಿಸುವ ರೀತಿಯಲ್ಲಿ ಪೊಲೀಸರು ವರ್ತಿಸುತ್ತಿದ್ದರು ಎಂದು ಸಂತ್ರಸ್ಥೆ ತಿಳಿಸಿದ್ದಾರೆ.

ಜತೆಗೆ ಸ್ವತಂತ್ರ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಬೇಕು. ಹಾಗಾದರೆ ಮಾತ್ರ ನನಗೆ ನ್ಯಾಯ ದೊರಕಬಹುದು. ಇಲ್ಲಿನ ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ಆಕೆ ಹೇಳಿದ್ದಾರೆ.

Comments are closed.