ಕರ್ನಾಟಕ

ನಮ್ಮ ಸಂಪರ್ಕದಲ್ಲಿ ಪಕ್ಷೇತರ ಅಭ್ಯರ್ಥಿಗಳು: ಶ್ರೀರಾಮುಲು

Pinterest LinkedIn Tumblr


ಚಿತ್ರದುರ್ಗ: ಸಿಎಂ ಎಚ್​.ಡಿ.ಕುಮಾರಸ್ವಾಮಿ ಬೆಂಗಳೂರು ಬಿಟ್ಟು ಬರುತ್ತಿಲ್ಲ. ಅವರಿಗೆ ಕುರ್ಚಿ ಬಿಟ್ಟು ಹೋದರೆ ಎಲ್ಲಿ ಸಿಎಂ ಸ್ಥಾನವೇ ಹೋಗಿಬಿಡುತ್ತದೆಯೋ ಎಂಬ ಭೀತಿ ಕಾಡುತ್ತಿದೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು.
ಚಳ್ಳಕೆರೆ ತಾಲೂಕಿನ ನೆಲಗೇತನಹಟ್ಟಿಯಲ್ಲಿ ಗ್ರಾಮವಾಸ್ತವ್ಯ ಹೂಡಿರುವ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಜನರ ಗೋಳು, ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರಿಗೆ ಬೇಕಾಗಿರುವುದು ವರ್ಗಾವಣೆ ದಂಧೆ ಮಾತ್ರ ಎಂದು ಆರೋಪಿಸಿದರು.

ರೈತರ ಸಾಲಮನ್ನಾಕ್ಕೆ 15 ದಿನ ಕಾಲಾವಕಾಶ ಕೇಳಿದ್ದ ಮುಖ್ಯಮಂತ್ರಿ ಈಗ ಅದನ್ನೇ ಮರೆತಿದ್ದಾರೆ. ಸಾಲಮನ್ನಾ ಮಾಡದಿದ್ದರೆ ವಿಧಾನ ಸೌಧದ ಹೊರಗೆ-ಒಳಗೆ ಹೋರಾಟ ಮಾಡುತ್ತೇವೆ. ಬಜೆಟ್ ವಿಷಯದಲ್ಲೇ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲವಿದೆ ಎಂದರು.
ಕೆಲ ಪಕ್ಷೇತರ ಅಭ್ಯರ್ಥಿಗಳು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಜನರು ತೀರ್ಪು ನೀಡಿದ್ದಾರೆ. ಭಗವಂತನ ಆಶಯ ಏನಿದೆ ನೋಡೋಣ ಎಂದು ತಿಳಿಸಿದರು.

ಲಿಂಗಪೂಜೆ ನೆರವೇರಿಸಿದ ಶ್ರೀರಾಮುಲು

ಕಾಶಿಯಲ್ಲಿ ಲಿಂಗದೀಕ್ಷೆ ಪಡೆದಿರುವ ಶ್ರೀರಾಮುಲು ನೆಲಗೇತನಹಟ್ಟಿ ಗ್ರಾಮದ ತಾನು ವಾಸ್ತವ್ಯ ಹೂಡಿರುವ ಗುಡಿಸಿಲಿನಲ್ಲಿ ಒಂದು ತಾಸಿಗೂ ಹೆಚ್ಚಿನ ಕಾಲ ಲಿಂಗಪೂಜೆ ನೆರವೇರಿಸಿದರು. ಶ್ರೀರಾಮುಲು ಅವರ ಇಷ್ಟಲಿಂಗ ಪೂಜೆಯನ್ನು ಜನರು ಸಾಲುಗಟ್ಟಿ ನಿಂತು ಕುತೂಹಲದಿಂದ ವೀಕ್ಷಿಸಿದರು.

Comments are closed.