ರಾಷ್ಟ್ರೀಯ

ಅಮ್ಮ ಮೊಬೈಲ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪುತ್ರ!

Pinterest LinkedIn Tumblr


ಕೋಲ್ಕೊತಾ: ಮಕ್ಕಳು ವೀಕ್ಷಿಸಬಾರದ ವೀಡಿಯೊವನ್ನು ಮಗ ವೀಕ್ಷಿಸುತ್ತಿರುವುದಕ್ಕೆ ಬೇಸತ್ತ ತಾಯಿ ಮೊಬೈಲ್‌ ಕಿತ್ತುಕೊಂಡಿದ್ದಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಗರಿಯಾದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಸೈಕತ್‌ ಬೊರಲ್‌ ತರಗತಿಯಲ್ಲಿ 83% ಅಂಕ ಗಳಿಸಿದ್ದಕ್ಕಾಗಿ ಪೋಷಕರು ಆತನಿಗೆ ಮೊಬೈಲ್‌ ಗಿಫ್ಟ್‌ ಮಾಡಿದ್ದರು. ಆದರೆ ಆತ ಅದನ್ನು ದುರುಪಯೋಗಪಡಸಿಕೊಂಡು ಅದರಲ್ಲಿ ವಯಸ್ಕರು ವೀಕ್ಷಿಸುವ ವೀಡಿಯೊ ವೀಕ್ಷಿಸುತ್ತಿದ್ದ. ಇದು ತಾಯಿಯ ಗಮನಕ್ಕೆ ಬಂದು ಎಚ್ಚರಿಕೆ ಕೂಡ ನೀಡಿದ್ದರು.

ಸ್ಥಳೀಯರು ಹೇಳುವಂತೆ ಸೈಕತ್‌ ನಾಚಿಕೆಯ ಸ್ವಭಾವದವನಾಗಿದ್ದು, ಉತ್ತಮ ವಿದ್ಯಾರ್ಥಿ. ಜಾಧವ್‌ಪುರ ವಿದ್ಯಾಪೀಠದಲ್ಲಿ ಓದುತ್ತಿದ್ದ ಆತ ಉತ್ತಮ ಅಂಕ ಗಳಿಸಿದರೆ ಮೊಬೈಲ್‌ ಕೊಡಿಸುವಂತೆ ಪೋಷಕರಲ್ಲಿ ಕೇಳಿದ್ದ. ಅದರಂತೆ ಜಿನಸು ಅಂಗಡಿ ನಡೆಸುತ್ತಿದ್ದ ಪೋಷಕರಾದ ಸತ್ಯರಂಜನ್‌ ಮತ್ತು ಮಿನು ಮೊಬೈಲ್‌ ಕೊಡಿಸಿದ್ದರು.

ಮೊಬೈಲ್‌ ಕೊಡಿಸಿದ ಬಳಿಕ ಸೈಕತ್‌ ಮೊಬೈಲ್‌ ವೀಕ್ಷಣೆಯನ್ನು ಚಟವನ್ನಾಗಿಸಿಕೊಂಡಿದ್ದ. ಓದಿನಲ್ಲೂ ಆಸಕ್ತಿ ತೋರದೆ ಅಂತರ್ಮುಖಿಯಾಗಿತ್ತ. ಆತನ ನಡವಳಿಕೆ ಬಗ್ಗೆ ಸಂಶಯಗೊಂಡು ಮೊಬೈಲ್‌ ನೋಡಿದರೆ ನೋಡಬಾರದ ವೀಡಿಯೊಗಳನ್ನು ಆತನ ನೋಡುತ್ತಿರುವುದು ಗಮನಕ್ಕೆ ಬಂತು ಎಂದು ತಾಯಿ ಮಿನು ಹೇಳಿದ್ದಾರೆ. ಎಚ್ಚರಿಕೆ ನೀಡಿದರೂ ಆತ ಮೊಬೈಲ್‌ ಇಲ್ಲದೆ ರಾತ್ರಿ ಕಳೆಯದಂತಾಗಿದ್ದ , ಹೀಗಾಗಿ ಮೊಬೈಲ್‌ ಕಿತ್ತುಕೊಂಡಿದ್ದಾಗಿ ತಿಳಿಸಿದ್ದಾರೆ.

ಊಟ ಮಾಡಿದ ಬಳಿಕ ತಮ್ಮನ ರೂಂನಲ್ಲಿ ಮಲಗುವುದಾಗಿ ಸೈಕತ್‌ ಹೇಳಿದ್ದ. ಮರುದಿನ ಬೆಳಗ್ಗೆ ಟ್ಯೂಷನ್‌ಗೆ ಹೋಗಬೇಕಾಗಿದ್ದ ಆತನನ್ನು ಎಬ್ಬಿಸಲು ಹೋದರೆ ನೇಣು ಹಾಕಿಕೊಂಡಿರುವುದು ಕಾಣಿಸಿತು. ಮಗನಿಗೆ ದಂಡಿಸಿದರೆ ಎಷ್ಟು ನೋವಾಗುವುದೆಂದು ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ಜೀವನ, ಕನಸು ಎಲ್ಲವೂ ಕೊನೆಯಾಗಿ ಹೋಯಿತು, ಮುಂದಿನ ಜೀವನವನ್ನು ಹೇಗೆ ಸಾಗಿಸಲಿ ಎಂದು ಮಿನು
ರೋಧಿಸುತ್ತಿದ್ದಾರೆ.

Comments are closed.