ರಾಷ್ಟ್ರೀಯ

15 ಲಕ್ಷ ಸಾಲ ತೀರಿಸಲು ಆಟೋ ಡ್ರೈವರ್​ನಿಂದ ಹೆಂಡತಿ-ಮಕ್ಕಳ ಮಾರಾಟಕ್ಕೆ ಯತ್ನ

Pinterest LinkedIn Tumblr


ನವದೆಹಲಿ: ಆಂಧ್ರಪ್ರದೇಶದ ಆಟೋ ಡ್ರೈವರ್ ತಾನು ಮಾಡಿದ ಸಾಲವನ್ನು ತೀರಿಸಲಾಗದೆ ತನ್ನ ಪತ್ನಿ ಹಾಗೂ ಅಪ್ರಾಪ್ತ ಮಗಳನ್ನು ಮಾರಾಟ ಮಾಡಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

15 ಲಕ್ಷ ಸಾಲವನ್ನು ಹೊಂದಿರುವ ಆತ ಪತ್ನಿ ಮತ್ತು ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದ.

​ 38 ವರ್ಷದ ಆಟೋ ಡ್ರೈವರ್​ ನಾಲ್ಕು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನನ್ನು ಹೊಂದಿದ್ದಾನೆ. ಮಕ್ಕಳೆಲ್ಲರೂ ಇನ್ನೂ ಅಪ್ರಾಪ್ತರಾಗಿದ್ದು, ಒಂದು ತಿಂಗಳ ಹಿಂದೆ 12 ವರ್ಷದ ಹೆಣ್ಣು ಮಗಳನ್ನು ನೀಡುವುದಾಗಿ ಅತ ಕರಾರು ಪತ್ರಕ್ಕೆ ಸಹಿ ಹಾಕಿದ್ದ. ಹೆಣ್ಣು ಮಗು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಆಕೆಯನ್ನು 1.5 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ.

ಹೆಣ್ಣು ಮಗು ಪ್ರೌಢಾವಸ್ಥೆಗೆ ಬಂದು ಆಕೆಯನ್ನು ಒಪ್ಪಿಸುವವರೆಗೂ ಇತರರ ಕಣ್ಣು ಆಕೆಯ ಮೇಲೆ ಬೀಳದಂತೆ ಎಚ್ಚರವಹಿಸಿದ್ದ. ಅಲ್ಲದೆ ಈ ಯೋಜನೆ ಹೆಂಡತಿಗೂ ಗೊತ್ತಾಗದಂತೆ ನೋಡಿಕೊಂಡಿದ್ದ. ಆದರೆ, ನಂತರ ದಿನಗಳಲ್ಲಿ ಗಂಡನ ನೀಚ ಬುದ್ಧಿಯನ್ನು ಅರಿತ ಹೆಂಡತಿ ತನ್ನ ಐದು ಮಕ್ಕಳನ್ನೂ ಮಾರಾಟ ಮಾಡಬಹುದೆಂದು ಭಯಭೀತಳಾಗಿದ್ದಳು.

ಮದ್ಯವಸನಿಯಾಗಿರುವ ಆತ 5 ಲಕ್ಷಕ್ಕೆ ತನ್ನ ಹೆಂಡತಿಯನ್ನು ಸೋದರ ಸಂಬಂಧಿಗೆ ಮಾರಾಟ ಮಾಡಲು ಆಕೆಯ ಸಹಿಯನ್ನು ಪಡೆಯಲು ಯತ್ನಿಸಿದ್ದ. ಇದನ್ನರಿತ ಪತ್ನಿ ತನ್ನ ಪೋಷಕರ ಬಳಿ ಹೇಳಿಕೊಂಡು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಳು.

ಇದು ನನ್ನಿಷ್ಟ. ನನಗೇನು ಬೇಕೆಂಬುದನ್ನು ನನ್ನ ಮಕ್ಕಳೊಂದಿಗೆ ಸೇರಿ ನಾನು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಇದರಿಂದ ಗಾಬರಿಗೊಂಡು 17 ಹಾಗೂ 12 ವರ್ಷದ ಹೆಣ್ಣು ಮಕ್ಕಳನ್ನ ತಂದೆಗೆ ಗೊತ್ತಾಗದಂತೆ ರಕ್ಷಿಸಿದ್ದಳು. ಆದರೆ, ಪತಿ ಆಕೆಗೂ ಮತ್ತು ಮಕ್ಕಳಿಗೂ ಕಿರುಕುಳ ನೀಡ ತೊಡಗಿದ್ದ.

ದೂರು ಸಂಬಂಧ ತನಿಖಾ ನಂತರ ದೂರು ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದು, ಮೊದಲು ಪತಿ-ಪತ್ನಿಯಲ್ಲಿ ತಿಳುವಳಿಕೆ ಮೂಡಿಸಲು ಪೊಲೀಸರು ಪ್ರಯತ್ನಿಸಿದ್ದಾರೆ.

Comments are closed.