ಕರ್ನಾಟಕ

ಲೈವ್‌ ಬ್ಯಾಂಡ್‌ ಮುಚ್ಚುವ ವಿಚಾರ: ಆಯುಕ್ತರಿಗೇ ಹೈಕೋರ್ಟ್‌ ನೋಟಿಸ್‌

Pinterest LinkedIn Tumblr


ಬೆಂಗಳೂರು: ಕಟ್ಟಡ ಸ್ವಾಧೀನ ಪ್ರಮಾಣ ಪತ್ರ ಹೊಂದಿಲ್ಲದಿರುವುದು ಹಾಗೂ ಇನ್ನಿತರೆ ನಿಯಮಾವಳಿ ಉಲ್ಲಂ ಸಲಾಗಿದೆ ಎಂದು ಆಕ್ಷೇಪಿಸಿ ಲೈವ್‌ಬ್ಯಾಂಡ್‌ ಮುಚ್ಚಲು ನೋಟಿಸ್‌ ನೀಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಗಳ ಸಂಬಂಧ ನಗರ ಪೊಲೀಸ್‌ ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಪೊಲೀಸ್‌ ಆಯುಕ್ತರು ನೀಡಿರುವ ನೋಟಿಸ್‌ ಪ್ರಶ್ನಿಸಿ ರೆಸಿಡೆನ್ಸಿ ರಸ್ತೆಯಲ್ಲಿರುವ ನರ್ತಕಿ ಬಾರ್‌ ಅಂಡ್‌ ರೆಸ್ಟೋರೆಂಟ್‌, ಕೆ.ಜಿ ರಸ್ತೆಯ ಕೋಸ್ಟಾರಿಕಾ ಬಾರ್‌ ಅಂಡ್‌ ರೆಸ್ಟೋರೆಂಟ್‌, ಟೌನ್‌ಹಾಲ್‌ ಸಮೀಪವಿರುವ ಲವರ್ ನೈಟ್‌ ಪಬ್ಸ್ ಪ್ರತಿನಿಧಿ ಪಿ.ಆರ್‌ ನರೇಂದ್ರಬಾಬು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ರಿಟ್‌ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ನಗರ ಪೊಲೀಸ್‌ ಆಯುಕ್ತ ಟಿ ಸುನೀಲ್‌ ಕುಮಾರ್‌ ಹಾಗೂ ಇನ್ನಿತರ ಪ್ರತಿವಾದಿ ಪೊಲೀಸ್‌ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿ ಬುಧವಾರಕ್ಕೆ ವಿಚಾರಣೆ ಮುಂದೂಡಿತು. ನಗರ ಪೊಲೀಸರು ಲೈವ್‌ಬ್ಯಾಂಡ್‌ ಮುಚ್ಚಲು ಆದೇಶಿಸಿ ಇತ್ತೀಚೆಗೆ ಹಲವು ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ಜಾರಿಗೊಳಿಸಿದ್ದರು.

Comments are closed.