ರಾಷ್ಟ್ರೀಯ

ಗಂಡ-ಹೆಂಡತಿ ಜಗಳಕ್ಕೆ ವಾಹನ ಸವಾರರ ಪರದಾಟ!

Pinterest LinkedIn Tumblr


ಮುರಾದ್‌ನಗರ: ಗಂಡ ಹೆಂಡತಿಯ ಜಗಳಕ್ಕೆ ವಾಹನ ಸವಾರರು ಪರಿತಪಿಸಿದ್ದಾರೆ.

ದಂಪತಿಗಳು ಬೀದಿಯಲ್ಲಿ ಆಡಿದ ಜಗಳಕ್ಕೆ ಟ್ರಾಫಿಕ್‌ ಜ್ಯಾಮ್‌ ಉಂಟಾಗಿ, ಸುಮಾರು 20 ನಿಮಿಷ ವಾಹನ ಸವಾರರು ಕಂಗಾಲಾಗಿದ್ದಾರೆ.

ಹೊಸದಿಲ್ಲಿಯಲ್ಲಿ ವಾಸವಾಗಿರುವ ದಂಪತಿ ಮನೆಯಲ್ಲಿ ನಿತ್ಯ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪತ್ನಿ ಬೇರೊಬ್ಬ ವ್ಯಕ್ತಿ ಜತೆ ಪ್ರೇಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ಬುಧವಾರ ಹರಿದ್ವಾರಕ್ಕೆ ತೆರಳುವುದಾಗಿ ಹೇಳಿದ ಪತ್ನಿಯ ಮೇಲೆ ಅನುಮಾನಗೊಂಡ ಪತಿ, ಆಕೆಯನ್ನು ಹಿಂಬಾಲಿಸಿದ್ದಾನೆ. ದಾರಿ ಮಧ್ಯ ಪತ್ನಿ ಕಾರಿಗೆ ವ್ಯಕ್ತಿಯೋರ್ವ ಸೇರಿಕೊಂಡಿದ್ದಾನೆ. ಜತೆಯಾಗಿ ಪ್ರಯಾಣ ಮಾಡುತ್ತಿರುವುದನ್ನು ಕಂಡ ಪತಿ, ಮೀರತ್-ದಿಲ್ಲಿ ಹೆದ್ದಾರಿಯಲ್ಲಿನ ವರ್ಧ್‌ಮಾನ್‌ ಪೊಲೀಸ್‌ ಚೌಕಿ ಬಳಿ ಕಾರನ್ನು ಅಡ್ಡಗಟ್ಟಿ, ಬೀದಿಯಲ್ಲಿ ರಂಪಾಟ ಆರಂಭಿಸಿದ್ದಾನೆ. ಪತ್ನಿಯನ್ನು ಥಳಿಸಲು ಆರಂಭಿಸಿದ ಪತಿಯನ್ನು ಸಮಾಧಾನ ಪಡಿಸಲು ಪತ್ನಿಯ ಪ್ರೇಮಿ ಮುಂದಾಗಿದ್ದಾನೆ. ಈ ವೇಳೆ ಆತನನ್ನೂ ಥಳಿಸಿ, ಕಾರನ್ನೂ ಜಖಂಗೊಳಿಸಿದ್ದಾನೆ.

ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಹೆದ್ದಾರಿಯಲ್ಲಿ ಈ ರಂಪಾಟ ನಡೆಯುತ್ತಿದ್ದರಿಂದ ಮಾರುದ್ದ ವಾಹನಗಳ ಸಾಲು ಏರ್ಪಟ್ಟಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಿಚಾರ ತಿಳಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮನೆಯ ದಿನ ನಿತ್ಯದ ಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಪತಿ ಹಣ ನೀಡುತ್ತಿಲ್ಲ. ಹೀಗಾಗಿ ಕೆಲಸ ಹುಡುಕಿಕೊಂಡು ಹರಿದ್ವಾರಕ್ಕೆ ತೆರಳಲು ನಿರ್ಧರಿಸಿದ್ದಾಗಿ ಪತ್ನಿ ಪೊಲೀಸರ ಬಳಿ ಹೇಳಿದ್ದಾಳೆ.

Comments are closed.