ಕರ್ನಾಟಕ

ಬಜೆಟ್‌ನಲ್ಲಿ ಸಹಕಾರ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಘೋಷಣೆ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಜುಲೈನಲ್ಲಿ ಮಂಡಿಸುವ ಹೊಸ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಕುರಿತು ಘೋಷಣೆ ಮಾಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾಡುವುದರಿಂದ ಸಾಮಾನ್ಯ ನಾಗರಿಕರಿಗೂ ಹೊರೆಯಾಗದಂತೆ ಮತ್ತು ರಾಜ್ಯದ ಆರ್ಥಿಕ ಶಿಸ್ತಿಗೂ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಈಗಾಗಲೇ ತೀರ್ಮಾನಿಸಿದೆ. ಇದಕ್ಕೆ ನೆರವು ಕೊಡಿ ಎಂದು ಕೇಂದ್ರವನ್ನು ಕೇಳಿದ್ದೇನೆ. ಹಾಗಂದ ಮಾತ್ರಕ್ಕೆ ಕೇಂದ್ರ ಸರ್ಕಾರವನ್ನು ಅವಲಂಬಿಸಿಲ್ಲ. ಯಾವುದೇ ಕಾರಣಕ್ಕೂ ಸಾಲ ಮನ್ನಾ ಮಾಡುವ ಬದಟಛಿತೆಯಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೆಂಗಳೂರು ಪ್ರಸ್‌ಕ್ಲಬ್‌ ಮತ್ತು ವರದಿಗಾರರ
ಕೂಟ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಒಂದೆರಡು ಕೋಟಿ ರೂಪಾಯಿಯ ಸಂಗತಿಯಲ್ಲ. ಇಂತಹ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಆರ್ಥಿಕ ಹೊಣೆಗಾರಿಕೆ ಅಧಿನಿಯಮದೊಳಗೆ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕಾಗುತ್ತದೆ. ನಾಗರಿಕರಿಗೂ ಹೊರೆಯಾಗಬಾರದು. ಜತೆಗೆ ಸಾಲ ಮನ್ನಾದ ಪೂರ್ಣ ನೆರವು ರೈತರಿಗೇ ಸಿಗಬೇಕೇ ಹೊರತು ಸಹಕಾರ ಬ್ಯಾಂಕ್‌ ಗಳು ಅಥವಾ ಮಧ್ಯವರ್ತಿಗಳಿಗಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ಮನ್ನಾ ಮಾರ್ಗಸೂಚಿ ಸಿದಟಛಿಪಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಾಗುವುದು. ಸರ್ಕಾರದ ನಿಲುವು ತಿಳಿಸಿ ಸಹಕಾರ ಕೋರಲಾಗುವುದು ಎಂದರು.

ಸಾಲ ಮನ್ನಾ ಸಾವಿರಾರು ಕೋಟಿ ರೂ. ಮೊತ್ತದ ಯೋಜನೆ ಆಗಿರುವುದರಿಂದ ಅದಕ್ಕೆ ಶಾಸನಸಭೆಯ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಹೇಳಿದ ಸಿಎಂ, ಬಜೆಟ್‌ನಲ್ಲೇ ಈ ಕುರಿತು ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಶೀಘ್ರದಲ್ಲೇ ಸಂಪುಟ ಸಭೆ ಕರೆದು ಬಜೆಟ್‌ ಅಧಿವೇಶನದ ದಿನಾಂಕ ನಿಗದಿಪಡಿಸಲಾಗುವುದು. ಸಾಲ ಮನ್ನಾದ ಜತೆಗೆ ರೈತರ ಕೃಷಿ ಪದ್ಧತಿಯಲ್ಲೂ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.

ಮೂರು ತಿಂಗಳಲ್ಲಿ ದೂರದೃಷ್ಟಿಯ ಚಿತ್ರಣ: ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ. ಸಚಿವರಾಗಿ ಅಧಿಕಾರ ವಹಿಸಿಕೊಂಡವರಾರೂ ವಿಧಾನಸೌಧದಲ್ಲಿ ಕುಳಿತು ಕೊಳ್ಳದೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲೂ ಸರ್ಕಾರ ಮೈಮರೆಯುವು ದಿಲ್ಲ. ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳುತ್ತ ದೆ. ರಾಜ್ಯದ ಅಭಿವೃದ್ಧಿಯಲ್ಲಿ ಬದಲಾವಣೆ ತರುವ
ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ಮೂಲಕ ಅದನ್ನು ತೋರಿಸುತ್ತೇವೆ. ಇನ್ನು ಮೂರು ತಿಂಗಳಲ್ಲಿ ಸರ್ಕಾರದ ದೂರದೃಷ್ಟಿಯ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ನಾನು ಅಸಹಾಯಕ ಅಲ್ಲ. ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಉರುಳುತ್ತದೆ ಎಂದು ಹೇಳಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಆಗುತ್ತಿದೆ. ಹಾಗೆ ಮಾಡಿದಾಗ, ಮುಂದಿನ ಲೋಕಸಭೆ ಚುನಾವಣೆವರೆಗೆ ನನ್ನನ್ನು ಯಾರೂ ಮುಟ್ಟಲು
ಸಾಧ್ಯವಿಲ್ಲ ಎಂದು ನಾನು ಪ್ರಶ್ನಿಸಿದ್ದನ್ನೇ, ಈ ಸರ್ಕಾರ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂದು ಹೇಳಲಾಗುತ್ತಿದೆ. ಈ ಸರ್ಕಾರ ಐದು ವರ್ಷ ಮುಂದು ವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಸಾಲ ಮನ್ನಾದಿಂದ ಅತಿ ಹೆಚ್ಚು ಅನುಕೂಲವಾಗುವುದು ಉತ್ತರ ಕರ್ನಾಟಕ ಭಾಗಕ್ಕೆ. ನೀರಾವರಿ ಯೋಜನೆಗಳನ್ನು ಕಾಲಮಿತಿ
ಯಲ್ಲಿ ಅನು ಷ್ಠಾನ ಗೊಳಿಸುವ ಮೂಲಕ ಆ ಭಾಗದ ಸಮಸ್ಯೆಗಳಿಗೆ ತೆರೆ ಎಳೆಯುವ ಸಂಕಲ್ಪ ಮಾಡಿದ್ದೇನೆ. ನೀರಾವರಿ ವಿಚಾ ರಕ್ಕೆ ಹಣದ ಕೊರತೆ ಇಲ್ಲ. ಜತೆಗೆ ರಾಜ್ಯದ ಜನತೆಯ ಸಮಸ್ಯೆ ಆಲಿಸಲು ಜನತಾದರ್ಶನ ಜತೆಗೆ ಗ್ರಾಮವಾಸ್ತವ್ಯ ಸಹ ಮುಂದುವರಿಸಲಿದ್ದೇನೆ ಎಂದು ಹೇಳಿದರು.

ನನ್ನ ಸರ್ಕಾರದ ಶಕ್ತಿ ಮಾಧ್ಯಮ
ಸಮ್ಮಿಶ್ರ ಸರ್ಕಾರದ ಗೊಂದಲಗಳ ಸಂದರ್ಭದಲ್ಲಿ ಮಾಧ್ಯಮಗಳ ವಿರುದಟಛಿ ಕಿಡಿ ಕಾರಿದ್ದ ಕುಮಾರಸ್ವಾಮಿ ಇದೀಗ ನನ್ನ ಸರ್ಕಾರದ ಶಕ್ತಿಯೇ ಮಾಧ್ಯಮ ಎಂದಿದ್ದಾರೆ. ನನ್ನನ್ನು ಇಂದು ಉಳಿಸಿರುವುದೇ ಮಾಧ್ಯಮ. ಈ ಮಾಧ್ಯಮಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಾ ಆಡಳಿತಕ್ಕೆ ಸಹಕರಿಸಿದರೆ ಇನ್ನಷ್ಟು ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಮಾಧ್ಯಮಗಳ ನೆರವಿನೊಂದಿಗೆ ಕೆಲಸ ಮಾಡಿ ರಾಜ್ಯದಲ್ಲಿರುವ ನ್ಯೂನತೆಗಳನ್ನು ಸರಪಡಿಸಿ ಆ ಕುರಿತು ಬರೆಸಿಕೊಳ್ಳಬೇಕು
ಎಂಬ ಆಸೆ ನನ್ನದು ಎಂದು ಅವರು ತಿಳಿಸಿದರು.

ಯಶಸ್ವಿನಿಗೆ ಬ್ರೇಕ್‌ ಹಾಕಲ್ಲ
ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯನ್ನು ಎರಡು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ಜಾರಿಗೊಳಿಸಲು ಒಪ್ಪಿರುವುದರಿಂದ ಈ ವಿಚಾರದಲ್ಲಿ ಕೆಲವು ಗೊಂದಲಗಳಾಗಿವೆ ಎಂದ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯಶಸ್ವಿನಿ ಯೋಜನೆಯನ್ನು ಸಮಗ್ರ ಆರೋಗ್ಯ
ಯೋಜನೆಯಲ್ಲಿ ವಿಲೀನಗೊಳಿಸದೆ ಪ್ರತ್ಯೇಕವಾಗಿ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಆದರೆ, ಪ್ರಾಯೋಗಿಕವಾಗಿ ವಿಲೀನಗೊಳಿಸಿ ನೋಡೋಣ ಎಂದು ಅಧಿಕಾರಿಗಳು ಸಲಹೆ ಮಾಡಿದ್ದರಿಂದ ಅದಕ್ಕೆ ಒಪ್ಪಿಕೊಂಡಿದ್ದೆ. ಬಳಿಕ ಸಮಗ್ರ ಆರೋಗ್ಯ
ಯೋಜನೆಗಿಂತ ಯಶಸ್ವಿನಿ ಉತ್ತಮ ಎಂದು ಕಂಡುಬಂದರೆ ಅದನ್ನು ಪ್ರತ್ಯೇಕವಾಗಿ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.

ಕೆಲ ಕ್ಷೇತ್ರಗಳಲ್ಲಿ ಬದಲಾವಣೆ
ಶಿಕ್ಷಣ, ಆರೋಗ್ಯ ಮತ್ತು ವಸತಿ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡುವ ಮೂಲಕ ಜನರಿಗೆ ಸೂಕ್ತವಾಗಿ ಸ್ಪಂದಿಸುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೆ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಕಡಿವಾಣ ಹಾಕುವುದಾಗಿ ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.

ಉಚಿತ ಬಸ್‌ಪಾಸ್‌
ಜಾತಿ, ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡದೇ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ವಿತರಿಸುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ಈ ಹಿಂದೆ ಬಜೆಟ್‌ನಲ್ಲಿ ಎಲ್ಲರಿಗೂ ಉಚಿತ ಬಸ್‌ಪಾಸ್‌ ಘೋಷಣೆ ಮಾಡಲಾಗಿತ್ತಾದರೂ 650 ಕೋಟಿ ರೂ. ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಆರ್ಥಿಕ ಇಲಾಖೆ ಪ್ರಸ್ತಾವನೆ ತಿರಸ್ಕರಿಸಿತ್ತು. ಈ ಬಗ್ಗೆ ಮತ್ತೂಮ್ಮೆ ಆರ್ಥಿಕ ಇಲಾಖೆ
ಜತೆ ಸಮಾಲೋಚನೆ ನಡೆಸಿ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಉಚಿತ ಬಸ್‌ಪಾಸ್‌ ವಿತರಿಸುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

Comments are closed.