ಕರ್ನಾಟಕ

ಕೆಲಸ ಮಾಡಲು ಯಾವ ಖಾತೆ ಆದರೇನು: ಜೆಡಿಎಸ್‌ ಅತೃಪ್ತರಿಗೆ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಕೆಲಸ ಮಾಡುವವರಿಗೆ ಯಾವ ಖಾತೆ ಆದರೇನು? ಉನ್ನತ ಶಿಕ್ಷಣಕ್ಕಿಂತ ಬೇರೆ ಖಾತೆ ಬೇಕೆ ಎಂದು ಸಿಎಂ ಕುಮಾರಸ್ವಾಮಿ ಅತೃಪ್ತರಿಗೆ ತಿರುಗೇಟು ನೀಡಿದ್ದಾರೆ.

ಖಾತೆ ಹಂಚಿಕೆ ಬಳಿಕ ಜೆಡಿಎಸ್ ನಲ್ಲಿ ಅಸಮಾಧಾನ ಕಂಡು ಬಂದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮೊದಲು ಮಂತ್ರಿಯಾಗಬೇಕು ಅಂತಾರೆ, ಬಳಿಕ ಇಂತಹ ಕೊಠಡಿಯೇ ಬೇಕು ಅಂತಾರೆ, ಇಂತದ್ದೇ ಮನೆ ಬೇಕು, ಇಂತದ್ದೇ ಖಾತೆ ಬೇಕು ಅನ್ನುತ್ತಾರೆ. ಕೆಲಸ ಮಾಡಲು ಯಾವ ಖಾತೆ ಆದರೇನು ಎಂದು ಕಿಡಿ ಕಾರಿದರು.

ಸಮರ್ಥವಾಗಿ ಕೆಲಸ ಮಾಡಲು ಎಲ್ಲಾ ಇಲಾಖೆಗಳಲ್ಲೂ ಅವಕಾಶಗಳಿವೆ. ಖಾತೆ ಹಂಚಿಕೆ ಪಕ್ಷದ ಆಂತರಿಕ ತೀರ್ಮಾನ. ಸಣ್ಣ ನೀರಾವರಿಗಿಂತ ಬೇರೆ ಖಾತೆ ಬೇಕೆ? ಉನ್ನತ ಶಿಕ್ಷಣಕ್ಕಿಂತ ಬೇರೆ ಖಾತೆ ಬೇಕೆ ಎಂದು ಪ್ರತಿಭಟನೆಗಿಳಿದಿರುವ ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಅವರ ಅಭಿಮಾನಿಗಳಿಗೆ ಪರೋಕ್ಷವಾಗಿ ಪ್ರಶ್ನಿಸಿದರು.

ಉನ್ನತ ಶಿಕ್ಷಣ ಖಾತೆಯನ್ನ ಜಿ.ಟಿ ದೇವೇಗೌಡರಿಗೆ ಹಾಗೂ ಸಿ.ಎಸ್ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ಅವರ ಬೆಂಬಲಿಗರು ಪ್ರಬಲ ಖಾತೆ ನೀಡುವಂತೆ ಇಂದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.

Comments are closed.