ರಾಷ್ಟ್ರೀಯ

ಧೂಳಿನ ಬಿರುಗಾಳಿಗೆ ತತ್ತರಿಸಿದ ರಾಜಧಾನಿ ದಿಲ್ಲಿ!

Pinterest LinkedIn Tumblr


ಹೊಸದಿಲ್ಲಿ : ರಾಷ್ಟ ರಾಜಧಾನಿ ದಿಲ್ಲಿ ಇಂದು ಶನಿವಾರ ಧೂಳಿನ ಬಿರುಗಾಳಿಗೆ ತತ್ತರಿಸಿದೆ. ಇದನ್ನು ಅನುಸರಿಸಿ ರಾಜಧಾನಿಯ ಮೇಲೆ ಜಡಿಮಳೆಯ ಅಬ್ಬರ ಸಾಗಿದೆ. ಹಲವಾರು ಮರಗಳು ಧರೆಗುರುಳಿದಿವೆ. ರಸ್ತೆ ತುಂಬ ನೀರು ತುಂಬಿಕೊಂಡಿದೆ.

ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದ ಕನಿಷ್ಠ 18 ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿದೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆ ದಿಲ್ಲಿಗರಿಗೆ ಕಟ್ಟೆಚ್ಚರದ ಮುನ್ಸೂಚನೆ ನೀಡಿದೆ. ಜಡಿ ಮಳೆಯೊಂದಿಗೆ ಪ್ರಬಲ ಗಾಳಿ ಬೀಸಲಿದ್ದು ಅದು ಧೂಳು ಮಿಶ್ರಿತವಾಗಿರುತ್ತದೆ ಎಂದು ಹೇಳಿದೆ. ಧೂಳು ಮಿಶ್ರಿತ ಬಿರುಗಾಳಿಯ ಪರಿಣಾಮವಾಗಿ ದಿಲ್ಲಿಯಲ್ಲಿ ಕಗ್ಗತ್ತಲು ಆವರಿಸಿಕೊಂಡಿದೆ. ದಿಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಇದೇ ರೀತಿಯ ಸ್ಥಿತಿ ನೆಲೆಗೊಂಡಿದೆ.

ಗಂಟೆಗೆ 70ರಿಂದ 80 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದ್ದು ಇದು ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಲಿದೆ; ಇದರೊಂದಿಗೆ ಮಳೆ ಕೂಡ ಬರಲಿದೆ; ಮುಂದಿನ ಮೂರು ತಾಸುಗಳಲ್ಲಿ ಈ ಸ್ಥಿತಿ ಇರುತ್ತದೆ ಎಂದು ಅದು ಹೇಳಿದೆ.

Comments are closed.