ಕರ್ನಾಟಕ

ಜೇವರ್ಗಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ, 10 ಗಾಯ

Pinterest LinkedIn Tumblr

ಜೇವರ್ಗಿ: ಕೆಎಸ್‌ಆರ್‌ಟಿಸಿ ಬಸ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಜೇವರ್ಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಬಳಿ ನಡೆದಿದೆ.

ಜೇವರ್ಗಿ ತಾಲ್ಲೂಕು ಚಿಗರತಿಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯರಾದ ಆಯೇಷಾ ಸಿದ್ದಿಕಿ (35), ಫರೀನ್ ಬೇಗಂ (40), ಯಾಳವಾರ ಸರ್ಕಾರಿ ಶಾಲೆಯ ಸಹರಾ ಕಲತೂನ್ (30), ಬಸ್ ಚಾಲಕ ರುಕ್ಕಪ್ಪ ಯಶವಂತರಾಯ (55) ಮೃತಪಟ್ಟವರು.

20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಜೇವರ್ಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ಬಸ್ ದಾವಣಗೆರೆಯಿಂದ ಕಲಬುರ್ಗಿಯತ್ತ ಹೊರಟಿತ್ತು. ಇನ್ನೊಂದು ಬಸ್ ಜೇವರ್ಗಿಯಿಂದ ಯಾದಗಿರಿ ಜಿಲ್ಲೆ ಶಹಾಪುರದತ್ತ ತೆರಳುತ್ತಿತ್ತು. ಬಸ್‌ಗೆ ಅಡ್ಡವಾಗಿ ಬಂದ ನಾಯಿಯ ಪ್ರಾಣ ಉಳಿಸಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.