ಕ್ರೀಡೆ

ಬಾಲಿವುಡ್ ನಟಿ ನಿಧಿ ಅಗರವಾಲ್- ಕ್ರಿಕೆಟಿಗ ಕೆಎಲ್ ರಾಹುಲ್ ಮಧ್ಯೆ ಏನಿದೆ…? ಈ ಬಗ್ಗೆ ರಾಹುಲ್ ಹೇಳಿದ್ದೇನು..?

Pinterest LinkedIn Tumblr

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಓಡಾಡುವಾಗ ಜನರ ಕಣ್ಣಿಗೆ ಬಿದ್ದಿದ್ದರು.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರು ಮೂಲದ ಬಾಲಿವುಡ್ ನಟಿ ನಿಧಿ ಅಗರವಾಲ್ ಜತೆ ರಾಹುಲ್ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಲ್ ರಾಹುಲ್, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದು ಹಲವು ವರ್ಷಗಳಿಂದ ಪರಸ್ಪರ ಪರಿಚಯವಿರುವ ಕಾರಣ ಭೇಟಿ ಮಾಡಿದ್ದೇವು ಎಂದು ಹೇಳಿದ್ದಾರೆ.

ಇನ್ನು ನಿಧಿ ಅಗರವಾಲ್ ಜತೆ ಡೇಟಿಂಗ್ ಕುರಿತು, ತಾನು ಪ್ರೀತಿಸುವ ಮಹಿಳೆಯನ್ನು ಮಹಾರಾಣಿಯಾಗಿ ನೋಡಿಕೊಳ್ಳುತ್ತೇನೆ. ಅಲ್ಲದೆ ಆ ವಿಷಯವನ್ನು ಯಾರಿಂದಲೂ ಮುಚ್ಚಿಡಲು ಪ್ರಯತ್ನ ಮಾಡುವುದಿಲ್ಲ. ನಾವಿಬ್ಬರು ಒಂದೇ ನಗರದಿಂದ ಮುಂಬೈಗೆ ಬಂದವರು. ಇಬ್ಬರ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದೇವೆ. ಹಲವು ಬಾರಿ ಈ ಕುರಿತು ಮಾತನಾಡಲು ಸಿಗುತ್ತೇವೆ ಎಂದು ಹೇಳಿದ್ದಾರೆ.

ನಿಧಿ ಅಗರವಾಲ್ ಅವರು 2017ರಲ್ಲಿ ತೆರೆಕಂಡಿದ್ದ ಮುನ್ನ ಮೈಕಲ್ ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದರು.

Comments are closed.