
ಬೆಂಗಳೂರು: ಕಳೆದ ಚುನಾವಣೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಾಲಿ ಸಂಸದರು ಸ್ಪರ್ಧಿಸಿ ಗೆದ್ದ ಕಾರಣ ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ಭರ್ಜರಿ 9 ಉಪ ಚುನಾವಣೆಗಳು ನಡೆಯಲಿವೆ.
ಚೆನ್ನಪಟ್ಟಣ ಹಾಗೂ ರಾಮನಗರದಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಜಯಭೇರಿ ಬಾರಿಸಿದ್ದರು. ಈಗ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು ಅಲ್ಲಿ ಉಪ ಚುನಾವಣೆ ನಡೆಯಬೇಕಿದೆ. ಅಲ್ಲದೇ ಸಂಸದರಾಗಿದ್ದ ಪುಟ್ಟರಾಜು,ಶ್ರೀರಾಮುಲು ಹಾಗೂ ಬಿ.ಎಸ್ ಯಡಿಯೂರಪ್ಪ ಕೂಡ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಅವರು ತಮ್ಮ ಲೋಕ ಸಭೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಾಗಾಗಿ ಮೇಲುಕೋಟೆಯಲ್ಲಿ ಜೆಡಿಎಸ್ ನಿಂದ ಗೆದ್ದಿರುವ ಪುಟ್ಟರಾಜು ತಮ್ಮ ಮಂಡ್ಯ ಲೋಕಸಭೆ ಕ್ಷೇತ್ರ, ಮೊಳಕಾಲ್ಮೂರಿನಿಂದ ಗೆದ್ದಿರುವ ಶ್ರೀರಾಮುಲು ಪ್ರತಿನಿಧಿಸಿದ್ದ ಬಳ್ಳಾರಿ ಹಾಗೂ ಶಿಕಾರಿಪುರದಿಂದ ಗೆದ್ದಿರುವ ಯಡಿಯೂರಪ್ಪ ಪ್ರತಿನಿಧಿಸಿದ್ದ ಶಿವಮೊಗ್ಗ ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕು.
ಹಾಲಿ ಎಮ್ ಎಲ್ ಸಿ ಯಾಗಿರುವ ಶಿವಮೊಗ್ಗ ನಗರದಿಂದ ಗೆದ್ದಿರುವ ಕೆ.ಎಸ್ ಈಶ್ವರಪ್ಪ, ಗೋವಿಂದರಾಜ ನಗರ ದಿಂದ ಗೆದ್ದಿರುವ ವಿ.ಸೋಮಣ್ಣ, ವಿಜಯಪುರದಿಂದ ಗೆದ್ದಿರುವ ಬಸವರಾಜ ಪಾಟೀಲ್ ಯತ್ನಾಳ್, ಕೊರಟೆಗೆರೆಯಿಂದ ಗೆದ್ದಿರುವ ಜಿ. ಪರಮೇಶ್ವರ್ ತಮ್ಮ ವಿಧಾನ ಪರಿಷತ್ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿದ್ದು, ಆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಹೀಗಾಗಿ ರಾಜ್ಯದಲ್ಲಿ ಮುಂದಿನ ತಿಂಗಳುಗಳಲ್ಲಿ ಉಪಚುನಾವಣೆಯ ಪರ್ವಗಳೇ ನಡೆಯಲಿದೆ.
Comments are closed.