ಮನೋರಂಜನೆ

ಮೊಟ್ಟ ಮೊದಲ ಸಲ ದಿ ವಿಲನ್’ ಚಿತ್ರದ ನಾಯಕಿ ಅಮಿ ಜಾಕ್ಸನ್‍ಗೆ ಡಬ್ಬಿಂಗ್ ಹೇಳಿದ ರಕ್ಷಿತಾ ಪ್ರೇಮ್!

Pinterest LinkedIn Tumblr


ನಟಿ ರಕ್ಷಿತಾ ಪ್ರೇಮ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮ್ಮ ಪಾತ್ರಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ರಕ್ಷಿತಾ ಪ್ರೇಮ್ ಮತ್ತೆ ಬೆಳ್ಳಿಪರದೆಗೆ ಕಡೆಗೆ ಹೆಜ್ಜೆ ಹಾಕಿದ್ದಾರೆ. ಆದರೆ ತೆರೆ ಮುಂದೆ ಅಲ್ಲ ತೆರೆ ಹಿಂದೆ ಮಿಂಚಲು ರೆಡಿಯಾಗಿದ್ದಾರೆ. ವಿಶೇಷ ಎಂದರೆ ತನ್ನ ಪತಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಅವರು ಭಾಗಿಯಾಗುತ್ತಿದ್ದಾರೆ.

ಇದೇ ಮೊಟ್ಟ ಮೊದಲ ಸಲ ಪತಿಯ ಜತೆಗಿನ ಸಿನಿಮಾ ಒಂದಕ್ಕೆ ಕೈ ಜೋಡಿಸಿದ್ದಾರೆ ರಕ್ಷಿತಾ ಪ್ರೇಮ್. ’ದಿ ವಿಲನ್’ ಚಿತ್ರದ ನಾಯಕಿ ಅಮಿ ಜಾಕ್ಸನ್‍ಗೆ ಡಬ್ಬಿಂಗ್ ಹೇಳಲು ಹೊರಟಿದ್ದಾರೆ ರಕ್ಷಿತಾ ಪ್ರೇಮ್. ಈ ಮೂಲಕ ಡಬ್ಬಿಂಗ್ ಕಲಾವಿದೆಯಾಗಿ ರಕ್ಷಿತಾ ಅವರಿಗೆ ಇದು ಹೊಸ ಸವಾಲು ಎನ್ನಬಹುದು.

ಈ ಬಗ್ಗೆ ಮಾತನಾಡಿರುವ ರಕ್ಷಿತಾ, “ಒಂದೊಂದು ಡೈಲಾಗ್ 20 ಸಲ ಹೇಳಿಸಿದ್ದಾರೆ. ಅವರಿಗೆ ಎಲ್ಲವೂ ಪಕ್ಕಾ ಆಗಿರಬೇಕು. ಡೈಲಾಗ್‌ಗಳು ಅದೆಷ್ಟೇ ಉದ್ದ ಇರಲಿ, ಅದನ್ನು ತುಂಡರಿಸಿ ಹೇಳುವಂತಿಲ್ಲ. ಒಂದೇ ಉಸಿರಿಗೆ ಅಷ್ಟೂ ಡೈಲಾಗ್ ಹೇಳಬೇಕು. ಹಲವಾರು ಸಲ ಡೈಲಾಗ್‍ಗಳನ್ನು ಮತ್ತೆ ಮತ್ತೆ ಹೇಳುವಂತೆ ಮಾಡಿದ್ದಾರೆ” ಎಂದಿದ್ದಾರೆ ರಕ್ಷಿತಾ.

ತಮಗೆ ಡಬ್ಬಿಂಗ್ ಮಾಡಲು ಅವಕಾಶ ಸಿಕ್ಕಿದ್ದು ಒಂದು ವಿಶೇಷ ಎನ್ನುತ್ತಾರೆ ರಕ್ಷಿತಾ. ಅಮಿ ಜಾಕ್ಸನ್ ಪಾತ್ರಕ್ಕೆ ಡಬ್ಬಿಂಗ್‌ ಹೇಳಲು ಸುದೀರ್ಘ ಸಮಯದಿಂದ ಪ್ರೇಮ್ ಕಲಾವಿದರೊಬ್ಬರನ್ನು ಹುಡುಕುತ್ತಿದ್ದರು. ಯಾಕೆಂದರೆ ಆ ಪಾತ್ರದ ಡೈಲಾಗ್‍ಗಳಲ್ಲಿ ಸಾಕಷ್ಟು ಏರಿಳಿತ ಇರುತ್ತದೆ.

ಡಬ್ಬಿಂಗ್ ಸ್ಟುಡಿಯೋದ ಆನಂದ್, ನಿರ್ದೇಶಕ ಮಹೇಶ್ ಬಾಬು ಅವರಿಗೆ ನನ್ನನ್ನು ಸೂಚಿಸಿದರು. ಪ್ರೇಮ್ ಅವರ ಅಸಿಸ್ಟೆಂಟ್ ನಿರ್ದೇಶಕರ ಸಹಾಯದಿಂದ ಬೇರೆಡೆ ಡಬ್ಬಿಂಗ್ ಮಾಡಿಸಿದರು. ಈ ಬಗ್ಗೆ ಪ್ರೇಮ್ ಅವರಿಗೆ ಏನೇನೂ ಮಾಹಿತಿ ಇರಲ್ಲಿಲ್ಲ. ಬಳಿಕ ನನ್ನ ಡಬ್ಬಿಂಗ್ ಅವರಿಗೆ ಕೇಳಿಸಿದಾಗ ಭಿನ್ನವಾಗಿದೆ ಎಂದು ಇಷ್ಟಪಟ್ಟರು. ಈ ಮೂಲಕ ನಾನು ’ದಿ ವಿಲನ್’ ಸಿನಿಮಾ ತಂಡ ಸೇರಿದಂತಾಯಿತು” ಎಂದಿದ್ದಾರೆ ರಕ್ಷಿತಾ ಪ್ರೇಮ್.

ಇನ್ನೊಬ್ಬರಿಗೆ ಡಬ್ಬಿಂಗ್ ಹೇಳುವುದು ಎಂದರೆ ಭಿನ್ನವಾಗಿರುತ್ತದೆ. ಇದುವರೆಗೆ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಹೇಳಿಕೊಂಡಿದ್ದೇನೆ. ಇದು ನನಗೆ ಇಷ್ಟವಾಗಿದ್ದು ಆ ಕೆಲಸವನ್ನೂ ಎಂಜಾಯ್ ಮಾಡಿದ್ದೇನೆ. ಇದಕ್ಕಾಗಿ ಮಹೇಶ್ ಅವರ ಸಹಕಾರ ಸಹಾಯ ಮರೆಯುವಂತಿಲ್ಲ. ನನ್ನ ಮೊದಲ ಸಿನಿಮಾದಿಂದಲೂ ಅವರು ಜತೆಗಿದ್ದಾರೆ ಎನ್ನುತ್ತಾರೆ ಪ್ರೇಮ್.

Comments are closed.