ಮುಂಬೈ

ತಾಯಿಗೆ ಹೊಡೆಯುವ -ಬೈಯ್ಯುವ ಮಗನಿಗೆ ತಾಯಿಯ ಮನೆಗೆ ಪ್ರವೇಶ ಮಾಡುವ ಹಕ್ಕಿಲ್ಲ: ಬಾಂಬೆ ಹೈಕೋರ್ಟ್

Pinterest LinkedIn Tumblr


ಮುಂಬಯಿ: ತಾಯಿಗೆ ಹೊಡೆಯುವ -ಬೈಯ್ಯುವ ಮಗನಿಗೆ ತಾಯಿಯ ಮನೆಗೆ ಪ್ರವೇಶ ಮಾಡುವ ಹಕ್ಕಿಲ್ಲ ಎಂದು ಬಾಂಬೆ ಹೈ ಕೋರ್ಟ್ ಹೇಳಿದೆ.

ಮುಂಬಯಿಯ ಮಲಬಾರ್‌ ಹಿಲ್‌ ಫ್ಲ್ಯಾಟ್‌ಗೆ ಪ್ರವೇಶಿಸಲು 72 ವರ್ಷದ ತಾಯಿ ಅನುಮತಿ ನೀಡುತ್ತಿಲ್ಲ. ಫ್ಲ್ಯಾಟ್‌ನ ಬೀಗದ ಕೈ ಬದಲಾಯಿಸಿದ್ದಾರೆ ಎಂದು ದಕ್ಷಿಣ ಮುಂಬೈಯ ನಿವಾಸಿ ಕೋರ್ಟ್‌ ಮೆಟ್ಟಲೇರಿದ್ದರು.

ಈ ಕೇಸ್‌ನ ವಿಚಾರಣೆ ಮಾಡಿದ ಕೋರ್ಟ್‌ ‘ಮಗನಿಗೆ ತಾಯಿಯ ಮನೆಯಲ್ಲಿ ಯಾವುದೇ ಹಕ್ಕಿಲ್ಲ’ ಎಂದು ಹೇಳಿದೆ. ‘ಆ ಮನೆಯ ಮೇಲೆ ಆತ ಯಾವುದೇ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಅವನು ಮನೆಯಲ್ಲಿ ಸಮಸ್ಯೆ ಉಂಟು ಮಾಡಿರುವುದರಿಂದ ಆ ತಾಯಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ, ಅಂಥ ಮಗನಿಗೆ ತಾಯಿ ಮನೆಯಲ್ಲಿರಲು ಯಾವುದೇ ಹಕ್ಕಿಲ್ಲ’ ಎಂದು ಕೋರ್ಟ್‌ ತೀರ್ಪು ನೀಡಿದೆ.

ವೈದ್ಯರಾಗಿದ್ದ ಆ ವೃದ್ಧೆ ತಾಯಿ ‘ಕಳೆದ ಕೆಲವು ವರ್ಷಗಳಿಂದ ಮಗನಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಆತ ನನ್ನನ್ನು ಹೊಡೆಯುತ್ತಿದ್ದ, ನನ್ನ ಮಗ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಅವನನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೌಟಂಬಿಕ ದೌರ್ಜನ್ಯದ ತಡೆ ಕಾಯ್ದೆ ಅನ್ವಯ ದೂರು ನೀಡಿದೆ’ ಎಂದಿದ್ದಾರೆ.

ಮಗನಿಗೆ ಹೆದರಿ ಆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರಲಿಲ್ಲ ಎಂದು ಹೇಳಿದಾಗ ‘ ಇನ್ನು ಮುಂದೆ ನೀವು ಹೆದರಬೇಕಾಗಿಲ್ಲ. ನಿಮ್ಮ ಮನೆಯಲ್ಲಿ ನೀವು ವಾಸಿಸಬಹುದು’ ಎಂದು ನ್ಯಾಯಾಧೀಶರು ಭರವಸೆ ನೀಡಿದ್ದಾರೆ.

Comments are closed.