ಕರ್ನಾಟಕ

ರಾಜ್ಯ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ ಮಾಡಬಹುದಾದ ನಾಲ್ಕು ಸಾಧ್ಯತೆಗಳು!

Pinterest LinkedIn Tumblr


ಈ ಕರ್ನಾಟಕ ಚುನಾವಣೆ ರಾಷ್ಟ್ರ ರಾಜಕಾರಣದಲ್ಲಿ ಹಲವು ಸಾಧ್ಯತೆಗಳನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತದ್ದಂತೆಯೇ 2019 ರ ಚುನಾವಣೆ ಬಗ್ಗೆ ಹಲವಾರು ಮಾತುಕತೆಗಳು ಆರಂಭವಾಗಿದೆ. ಈ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ ಮಾಡಬಹುದಾದ ಕೆಲವೊಂದು ಸಾಧ್ಯತೆಗಳು ಇಲ್ಲಿವೆ.

1.ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯಾವ ನಡೆಯನ್ನೂ ಕೂಡ ಅನುಸರಿಸಲು ಕಾಂಗ್ರೆಸ್ ತಯಾರಿದ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ. ಚುನಾವಣೆಗೆ ಮೊದಲಿ ಬದ್ದ ವೈರಿಯಾಗಿದ್ದ ಜೆಡಿಎಸ್ ನೊಂದಿಗೆ ಕೈ ಜೋಡಿಸಿ ಮುಖ್ಯಮಂತ್ರಿ ಸ್ಥಾನ ಕೂಡ ಬಿಟ್ಟುಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಇದರಿಂದಾಗಿ ದೇಶದಲ್ಲಿ ಬಿಜೆಪಿ ವಿರೋಧಿ ರಾಜಕೀಯಕ್ಕೆ ಮುನ್ನುಡಿ ಬರೆದಂತಾಗಿದೆ.

2. ತೃತೀಯ ರಂಗ ರಚನೆ
ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೃತೀಯ ರಂಗ ರಚನೆ ಗೂ ಈ ಚುನಾವಣೆ ಕಾರಣವಾದರೂ ಅಚ್ಚರಿಯಿಲ್ಲ. ಅದಕ್ಕಿಂತ ಮೊದಲು ನಡೆಯುವ ರಾಜಸ್ತಾನ್, ಮಧ್ಯಪ್ರದೇಶ ಹಾಗೂ ಚತ್ತೀಸ್ ಘಡ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ತೃತೀಯ ರಂಗ ರಚನೆಯಾಗರೂ ಅಚ್ಚರಿ ಪಡಬೇಕಿಲ್ಲ.

3. ಬಿಜೆಪಿಗೆ ಪಾಠ
ಬಹುಮತ ಬರದಿದ್ದರೂ ಅಥವಾ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಡಿಕೊಳ್ಳುವ ಬಿಜೆಪಿಯ ಸ್ಟಾಟರ್ಜಿ ಇಷ್ಟರ ವರೆಗೆ ಕೆಲಸ ಮಾಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಚುನಾವಣೆ ಬಳಿಕ ಮೈತ್ರಿ ಮಾಡಿಕೊಂಡಿದ್ದು ಬಿಜೆಪಿ ಅಧಿಕಾರ ಹಿಡಿಯುವ ಆಸೆಯನ್ನು ಮಣ್ಣು ಪಾಲು ಮಾಡಿತ್ತು. ಇದು ಯಾವ ಮಾರ್ಗ ಅನುಸರಿಸಿಯಾದರೂ ಸರಿಯೇ ಅಧಿಕಾರ ಹಿಡಿಯಬೇಕು ಎಂದು ಹಪಹಪಿಸುತ್ತಿದ್ದ ಬಿಜೆಪಿಗೆ ತಕ್ಕ ಪಾಠ ಕಲಿಸಿರುವುದು ಸುಳ್ಳಲ್ಲ.

4. ಲೋಕಸಭೆ ಚುನಾವಣೆಗೆ ದಿಕ್ಸೂಚಿ
ಈ ಚುನಾವಣೆ 2019 ಲೋಕಸಭೆಗೆ ದಿಕ್ಸೂಚಿಯಾಗಿವುದರಲ್ಲಿ ಯಾವುದೇ ಸಂಶಯವಿಲ್ಲ. ಜಾತ್ಯತೀತ ಪಕ್ಷಗಳು ಒಟ್ಟು ಸೇರಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಲು ಈ ಚುನಾವಣೆ ಇತರೆ ಪಕ್ಷಗಳಿಗೆ ಪ್ರೇರಣೆಯಾಗಬಹುದು.

Comments are closed.