ರಾಷ್ಟ್ರೀಯ

ನಕ್ಸಲ್ ದಾಳಿಗೆ 6 ಮಂದಿ ಭದ್ರತಾ ಸಿಬಂದಿ ಹುತಾತ್ಮ

Pinterest LinkedIn Tumblr


ದಾಂತೇವಾಡ: ಛತ್ತೀಸ್‌ಘಡದಲ್ಲಿ ಭಾನುವಾರ ನಕ್ಸಲರು ಹೊಂಚು ದಾಳಿ ನಡೆಸಿದ್ದು , 6 ಮಂದಿ ಭದ್ರತಾ ಸಿಬಂದಿಗಳು ಹುತಾತ್ಮರಾಗಿದ್ದಾರೆ.

ಚೋಲ್‌ನಾರ್‌ ಎಂಬಲ್ಲಿ ನಕ್ಸಲರು ಐಇಡಿ ಸಿಡಿಸಿದ ಪರಿಣಾಮವಾಗಿ ಛತ್ತೀಸ್‌ಘಡ ಸಶಸ್ತ್ರ ಪಡೆಯ ಮೂವರು ಸಿಬಂದಿಗಳು, ಜಿಲ್ಲಾ ಸಶಸ್ತ್ರ ಪಡೆಯ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಸಿಬಂದಿ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಸಿರ್‌ಪಿಎಫ್ ಪಡೆಗಳನ್ನು ಕಳುಹಿಸಿ ಕೂಂಬಿಂಗ್‌ ಚುರುಕುಗೊಳಿಸಲಾಗಿದೆ.

Comments are closed.