ಬೆಂಗಳೂರು: ಮೊಬೈಲ್ ಕದ್ದು, ಅದರಲ್ಲಿದ್ದ ಜೋಡಿಯ ಆಕ್ಷೇಪಾರ್ಹ ಪೋಟೊಗಳನ್ನು ಮುಂದಿಟ್ಟು ಯುವತಿಯನ್ನು ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ ಮತ್ತು ಆ ಪೋಟೊಗಳನ್ನು ಡಿಲಿಟ್ ಮಾಡಬೇಕಾದರೆ 20 ಲಕ್ಷ ರೂ. ನೀಡುವಂತೆ ಬೆದರಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ರಸ್ತೆಯ ಆರ್.ವಿ ಕಾಲೇಜು ಬಳಿ ಡ್ರೋನ್ ಪೈಲಟ್ , ಲಾಲ್ ಬಹದ್ದೂರ್ ಶಾಸ್ತ್ರಿ ನಗರ ನಿವಾಸಿ ಕೇಶವ್ ವಿಜಯಂ ಅವರ ಗಮನ ಬೇರೆಡೆ ಸೆಳೆದು ಆರೋಪಿ ಮೊಬೈಲ್ ಎಗರಿಸಿದ್ದ.
ಬಳಿಕ ಉಳ್ಳಾಲ ಮೈನ್‌ರೋಡ್ ನಿವಾಸಿಯಾಗಿರುವ ಆರೋಪಿ ರಾಘವೇಂದ್ರ ಸಿಂಗ್ ಮೊಬೈಲ್‌ನಲ್ಲಿದ್ದ ಜೋಡಿಯ ಪೋಟೊ, ವೀಡಿಯೊವನ್ನು ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ, ಯುವತಿಯನ್ನು ಸೆಕ್ಸ್‌ಗೆ ಬರುವಂತೆ ಒತ್ತಾಯಿಸುತ್ತಿದ್ದ. ಆ ಪೋಟೊ, ವೀಡಿಯೊಗಳನ್ನು ಡಿಲಿಟ್ ಮಾಡಲು 20 ಲಕ್ಷ ರೂ. ನೀಡುವಂತೆ ಬೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಜೋಡಿ ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದರು. ಹತ್ತು ಪೊಲೀಸರ ತಂಡವು ಆರೋಪಿಯನ್ನು ಬಂಧಿಸಿದೆ.
ಮೇ ಆರರಂದು ಕಾರಿನಿಂದ ಮೊಬೈಲ್ ಕಳವಾಗಿದ್ದು, ಮರುದಿನ ಸಿಮ್ ಬ್ಲಾಕ್ ಆಗಿತ್ತು. ಅದಾದ ಕೆಲವು ದಿನಗಳ ಬಳಿಕ ಸ್ನೇಹಿತೆಯೊಬ್ಬರು ಕರೆ ಮಾಡಿ, ಅಪರಿಚಿತನೊಬ್ಬ ಕರೆ ಮಾಡಿ ತನ್ನ ಜತೆ ಸೆಕ್ಸ್‌ಗೆ ಬರದಿದ್ದರೆ ಪೋಟೊ, ವೀಡಿಯೊಗಳನ್ನು ಲೀಕ್ ಮಾಡುವುದಾಗಿ ಹೇಳಿದ್ದಲ್ಲದೆ ಅವುಗಳನ್ನು ಡಿಲಿಟ್ ಮಾಡಬೇಕಾದರೆ ಇಪ್ಪತ್ತು ಲಕ್ಷ ಕೇಳುತ್ತಿದ್ದಾನೆ. ಆ ಪೋಟೊಗಳನ್ನು ಕೂಡ ನನಗೆ ತೋರಿಸಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾಗಿ ಕೇಶವ್ ವಿಜಯಂ ಹೇಳಿದ್ದಾರೆ.
ಸೈಬರ್ ಪೊಲೀಸರು ಆರೋಪಿಯನ್ನು ಟ್ರ್ಯಾಪ್ ಮಾಡಿ ಇಪ್ಪತ್ತು ಪಕ್ಷದ ಬೇಡಿಕೆಯನ್ನು ಎರಡು ಲಕ್ಷಕ್ಕೆ ಇಳಿಸಿದರು. ಪೊಲೀಸರು ಇಪ್ಪತ್ತು ಸಾವಿರ ನಗದು ಈಗ ನೀಡಿ ಉಳಿದ ಮೊತ್ತ ಮತ್ತೆ ಕೊಡುವುದಾಗಿ ಸಂತ್ರಸ್ತ ಮಹಿಳೆಯ ಮೂಲಕ ಆರೋಪಿಗೆ ಹೇಳಿಸಿದರು.
ಉಳಿದ ಮೊತ್ತ ನೀಡಿದ ಬಳಿಕ ಪೋಟೊ, ವೀಡಿಯೊ ಡಿಲಿಟ್ ಮಾಡುವುದಾಗಿ ಆರೋಪಿ ಆಕೆಗೆ ಹೇಳಿದ್ದ. ಅದರಂತೆ ಕೆಂಗೇರಿಯಲ್ಲಿ ಅವರಿಬ್ಬರನ್ನು ಭೇಟಿ ಮಾಡಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಆರೋಪಿ ಪಿಯುಸಿ ಫೇಲ್ ಆಗಿದ್ದು, ತಂತ್ಜ್ಞಾನದಲ್ಲಿ ಪರಿಣತ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.