ಕರ್ನಾಟಕ

ನಾನು ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯರಿಗೆ ನಡುಕ: ಯೋಗಿ ಆದಿತ್ಯನಾಥ್​

Pinterest LinkedIn Tumblr


ಹಾವೇರಿ: ನಾನು ರಾಜ್ಯಕ್ಕೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಡುಕ ಶುರುವಾಗುತ್ತೆ. ಏಕೆಂದರೆ ನಾನು ರಾಷ್ಟ್ರೀಯವಾದಿ ಹೀಗಾಗಿ ಆತಂಕವಾದಿಗಳಿಗೆ ರಕ್ಷಣೆ ನೀಡಿರುವವರಿಗೆ ನಡುಕ ಉಂಟಾಗುತ್ತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವ್ಯಂಗ್ಯವಾಡಿದರು.

ಹೀರೆಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯು. ಬಿ. ಬಣಾಕಾರ್​ ಪರ ಪ್ರಚಾರ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಹಿಂದು ಕಾರ್ಯಕರ್ತರನ್ನು ಜಿಹಾದಿಗಳು ಹತ್ಯೆ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿದ್ದು, ಭ್ರಷ್ಟಾಚಾರಿಗಳು ಹಾಗೂ ಜಿಹಾದಿಗಳನ್ನು ಕರೆದುಕೊಂಡು ಆಡಳಿತ ‌ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ರೈತರಿಗೆ ಸಹಾಯ ಹಸ್ತ ಬೇಕಿದೆ
ಮೋದಿ ಹಾಗೂ ನಮ್ಮ ಸರಕಾರ 86 ಲಕ್ಷ ರೈತ ಕುಟುಂಬಗಳ ಸಾಲ ಮನ್ನಾ ಮಾಡಿದೆ. ಆದರೂ ನನಗೆ ನೋವಾಗುತ್ತೆ. ಕರ್ನಾಟಕ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸರ್ಕಾರ ಮಾಡಿದೆ. ರೈತರಿಗೆ ಇಂದು ಸಹಾಯ ಹಸ್ತ ಬೇಕಿದೆ. ಕೇಂದ್ರದ ಫಸಲ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆ ರೈತರ ಮನೆ ತಲುಪಬೇಕಿದೆ. ಆದರೆ, ಕರ್ನಾಟಕದಲ್ಲಿನ ಭ್ರಷ್ಟಾಚಾರದಿಂದ ಸಾಧ್ಯವಾಗುತ್ತಿಲ್ಲ. ಅದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಒಂದು‌ ನಾಣ್ಯದ ಎರಡು ಮುಖಗಳು
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದಕ್ಕೊಂದು ಪೂರಕವಾಗಿದ್ದು, ಒಂದು‌ ನಾಣ್ಯದ ಎರಡು ಮುಖಗಳಿದ್ದಂಗೆ. ಕಾಂಗ್ರೆಸ್ ಮತ್ತು ಜಿಹಾದಿಗಳು ಒಂದಾಗಿವೆ. ಹೀಗಾಗಿ ಅಭಿವೃದ್ಧಿ ಪರವಾದ ಬಿಜೆಪಿಯ ಗೆಲ್ಲಿಸಲು ಪಣ ತೊಡಬೇಕಿದೆ. ನಿಮ್ಮಿಂದ ಆಯ್ಕೆಯಾದ ಮೇಲೆ ನಿಮ್ಮ ಬಳಿ ಬರದಂತ ವ್ಯಕ್ತಿಯನ್ನು ಕಾಂಗ್ರೆಸ್​ ಇಲ್ಲಿ ಕಣಕ್ಕಿಳಿಸಿದೆ ಎಂದು ಬಿ ಸಿ ಪಾಟೀಲ್ ವಿರುದ್ಧ ಕಿಡಿಕಾರಿದರು.

ಕೆಲಸ ಬಿಡುತ್ತಾರೆ ಇಲ್ಲ ಸಾವಿಗೀಡಾಗುತ್ತಾರೆ
ಇಲ್ಲಿನ ಕಾಂಗ್ರೆಸ್ ಸರಕಾರ ದುರಾಡಳಿ ಮತ್ತು ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅಧಿಕಾರಿಗಳು ಕೆಲಸ ಬಿಡುತ್ತಾರೆ ಇಲ್ಲ ಸಾವಿಗೀಡಾಗುತ್ತಾರೆ. ಇಂತಹ ಸರಕಾರವನ್ನು ಕಿತ್ತೆಸೆಯಬೇಕು ಎಂದು ಕರೆ ನೀಡಿದರು.

ಕನ್ನಡದಲ್ಲಿ ಭಾಷಣ ಆರಂಭ
ಕರ್ನಾಟಕ ಜನತೆಗೆ ಹೃದಯ ಪೂರ್ವಕ ಅಭಿನಂದನೆಗಳು. ಬಿಜೆಪಿ ಕಾರ್ಯಕ್ರಮಕ್ಕೆ ಇಷ್ಟು ಜನ ಬಂದಿದ್ದಕ್ಕೆ ಧನ್ಯವಾದಗಳು. ಕದಂಬೇಶ್ವರ, ಧಾರ್ಮಿಕ ಮಠಗಳ ಭೂಮಿಗೆ ಬಂದಿರೋದು ನನ್ನಪುಣ್ಯ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

Comments are closed.