ಕರ್ನಾಟಕ

ಮತದಾರರ ಗುರುತಿನ ಚೀಟಿಗಳೆಲ್ಲಾ ಅಸಲಿ; ಚುನಾವಣೆ ಮುಂದೂಡುವುದಿಲ್ಲ: ಆಯೋಗ

Pinterest LinkedIn Tumblr


ಬೆಂಗಳೂರು: ಇಲ್ಲಿನ ರಾಜರಾಜೇಶ್ವರೀ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಜಾಲಹಳ್ಳಿ ಸಮೀಪ ಪತ್ತೆಯಾದ ಮತದಾರ ಚೀಟಿಗಳು ಎಲ್ಲವೂ ಅಸಲಿ ಎಂದು ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಚುನಾವಣೆ ಘೋಷಿತ ದಿನದಂದೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿನ್ನೆ ಜಾಲಹಳ್ಳಿಯ ಕಟ್ಟಡವೊಂದರಲ್ಲಿ ಸುಮಾರು ಹತ್ತು ಸಾವಿರ ಮತದಾರ ಚೀಟಿಗಳು ಪತ್ತೆಯಾಗಿದ್ದವು.

ಅಲ್ಲಿ ಪತ್ತೆಯಾದ ವೋಟರ್ ಐಡಿಗಳು ನಕಲಿ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದವು. ಕಾಂಗ್ರೆಸ್ ನಾಯಕರು ನಕಲಿ ವೋಟರ್ ಐಡಿ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ರಾಜರಾಜೇಶ್ವರಿ ನಗರದ ವಿಧಾನಸಭೆ ಚುನಾವಣೆಯನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗದ ಮೊರೆ ಹೊಗಿದ್ದವು. ಆದರೆ ಅಲ್ಲಿ ಪತ್ತೆಯಾಗಿರುವ ಹತ್ತು ಸಾವಿರದಷ್ಟು ವೊಟರ್ ಐಡಿಗಳು ಅಸಲಿಯಾಗಿದ್ದು, ಚುನಾವಣೆ ಮುಂದೂಡಲಾಗುವುದಿಲ್ಲ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದುಉನ್ನತ ತನಿಖೆ ನಡೆಸಲಾಗುತ್ತದೆ. ರಾಜರಾಜೇಶ್ವರಿ ನಗರದಲ್ಲಿ ಈ ಬಾರಿ ಅತೀ ಹೆಚ್ಚು ಹೊಸ ಮತದಾರರಿದ್ದಾರೆ. ಅವರಿಂದ ಈ ವೋಟರ್ ಐಡಿಗಳನ್ನು ಸಂಗ್ರಹಿಸಲಾಗಿದೆ. ಎಲ್ಲವೂ ಅಸಲಿ ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.

ಪತ್ತೆಯಾದ ವೊಟರ್ ಐಡಿಗಳು ನಕಲಿ ಎಂದು ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಕೆಸರೆರೆಚಾಟ ನಡೆಸಿದ್ದವು. ಪ್ರಧಾನಿ ಮೋದಿ ಕೂಡ ತಮ್ಮ ಚಿಕ್ಕಮಗಳೂರು ಹಾಗೂ ಬೆಳಗಾವಿ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಗೆ ತಿವಿದಿದ್ದರು. ಆದರೆ ಈಗ ವೊಟರ್ ಐಡಿ ಅಸಲಿ ಎಂದು ಸಾಬೀತಾಗಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

Comments are closed.