
ಹೊಸದಿಲ್ಲಿ: ಮೇವು ಹಗರಣದ ರುವಾರಿ, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ಗೆ 5 ದಿನಗಳ ಪರೋಲ್ ಲಭಿಸಿದೆ.
ಮೇ 12 ರಂದು ಲಾಲು ಪ್ರಸಾದ್ ಹಿರಿಯ ಮಗನ ತೇಜ್ ಪ್ರತಾಪ್ ಯಾದವ್ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ ಅನುಮತಿ ನೀಡಿರುವುದಾಗಿ ಲಾಲು ಪ್ರಸಾದ್ ವಕೀಲ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಶಾಸಕರಾಗಿರುವ ತೇಜ್ ಪ್ರತಾಪ್ ಯಾದವ್ ಈ ಹಿಂದೆ ಬಿಹಾರ ರಾಜ್ಯದ ಸಚಿವರಾಗಿದ್ದರು. ಆರ್‌ಜೆಡಿಯ ಶಾಸಕ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯ ರಾಯ್ ಜತೆ ವಿವಾಹ ನಡೆಯಲಿದೆ. ಕಳೆದ ಡಿಸೆಂಬರ್‌ನಿಂದ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್, ಅನಾರೋಗ್ಯದ ಕಾರಣ ಮೇ 1ರಿಂದ ಜಾರ್ಖಂಡ್‌ನ ಆರ್‌ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರೋಲ್ ಲಭಿಸಿರುವ ಹಿನ್ನೆಲೆಯಲ್ಲಿ ಇಂದು ಅವರು ಪಟನಾಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಬಿರ್ಸಾ ಮುಂದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅವರನ್ನು ಅನಾರೋಗ್ಯದ ಕಾರಣ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಂಚಿಯ ಆರ್‌ಐಎಂಎಸ್‌ಗೆ ದಾಖಲಿಸಲಾಗಿತ್ತು. ಅನಾರೋಗ್ಯದ ಕಾರಣ ಏ.18ರಂದು ತೇಜ್ ಪ್ರತಾಪ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಸಿಬಿಐ ವಿಶೇಷ ನ್ಯಾಯಾಲಯದಿಂದ ಲಾಲು ಪ್ರಸಾದ್‌ಗೆ ಮೇವು ಹಗರಣ ಸಂಬಂಧ ಜೈಲು ಶಿಕ್ಷೆಯಾಗಿತ್ತು.
Comments are closed.