1
ಮೈಸೂರು: “ಪಕ್ಷೇತರರು, ಬಿಎಸ್‌ಪಿ ಜತೆಗೂಡಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸಲಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾರು ಏನೇ ಹೇಳಲಿ, ಸಮೀಕ್ಷೆಗಳು ನಮಗೆ ಯಾವುದೇ ಸಂಖ್ಯೆ ನೀಡಲಿ, ಕಾಂಗ್ರೆಸ್-ಬಿಜೆಪಿ ಗಿಂತ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಲಿದೆ. 10ರಿಂದ 12 ಪಕ್ಷೇತರರು, ಬಿಎಸ್ಪಿಗೆ ಮೂರ್‍ನಾಲ್ಕು ಸ್ಥಾನಗಳು ಬರಲಿದೆ. ಇವರನ್ನು ಒಟ್ಟುಗೂಡಿಸಿ ಸರ್ಕಾರ ರಚಿಸುತ್ತೇವೆ. ಈ ಬಗ್ಗೆ ನನ್ನದೇ ಆದ ಲೆಕ್ಕಚಾರವಿದೆ’ ಎಂದರು.
ಕಿಂಗ್ ಆಗ್ತೀವೆ: ಕಾಂಗ್ರೆಸ್-ಬಿಜೆಪಿ ಆಡಳಿತ ನೋಡಿ ಸಾಕಾಗಿರುವ ರಾಜ್ಯದ ಜನತೆ, ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಅಧಿಕಾರಕ್ಕೆ ತರಬೇಕೆಂದು ನಿಶ್ಚಯಿಸಿ ದ್ದಾರೆ. ಸಿದ್ದರಾಮಯ್ಯ ಮಾತುಗಳನ್ನು ಕೇಳಿದ್ದೇನೆ, ಪಾಪ ಹೇಳಿಕೊಳ್ಳಲಿ ಬಿಡಿ, ನಾವು ಕಿಂಗ್ ಮೇಕರ್ ಆಗಲ್ಲ. ಕಿಂಗ್ ಆಗಿಯೇ ಆಗುತ್ತೇವೆ ಎಂದರು.
Comments are closed.