ಕರ್ನಾಟಕ

ಮೋದಿ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ: ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಅನಂತ್‌ಕುಮಾರ್ ಹೆಗಡೆ ಬಾಯಲ್ಲಿ ಕಲಗಚ್ಚು ಇದೆ. ಮೋದಿ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಹಾಗೂ ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಆ ಮೋದಿ ಮುಧೋಳ ನಾಯಿಯಿಂದ ಕಾಂಗ್ರೆಸ್ ನಿಯತ್ತು ಕಲಿಯ ಬೇಕು ಎನ್ನುತ್ತಿದ್ದಾನೆ. ಅವನಿಗೇ ನಿಯತ್ತಿಲ್ಲ. ತನ್ನನ್ನು ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ. ಇವರೆಲ್ಲ ನಾಚಿಕೆ ಇಲ್ಲದೆ ಕಾಂಗ್ರೆಸ್‌ಗೆ ಪಾಠ ಹೇಳುತ್ತಿದ್ದಾರೆ. ಇವರಿಬ್ಬ ರನ್ನೂ ಏನು ಮಾಡಬೇಕು ಹೇಳಿ? ಮೈಸೂರಿನ ಚಾಮರಾಜ ಕ್ಷೇತ್ರದ ಸಮಾ ವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಏನ್ ನರೇಂದ್ರ ಮೋದಿ ಒಬ್ಬರಿಗೇನಾ 58 ಇಂಚಿನ ಎದೆ ಇರುವುದು? ಪೈಲ್ವಾನರಿಗೂ ದೊಡ್ಡ ಎದೆ ಇರುತ್ತದೆ. ಇದರಲ್ಲೇನಿದೆ ವಿಶೇಷ? ಮೋದಿ ಪ್ರಯೋಜನಕ್ಕೆ ಬಾರದ ಮಾತುಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಮನ್ ಕೀ ಬಾತ್ ಅಂತಾರೆ. ಅವರ ಮನ್ ಕೀ ಬಾತ್ ನಿಂದ ಹೊಟ್ಟೆ ತುಂಬುತ್ತದೆಯೇನು? 58 ಇಂಚಿನ ದೊಡ್ಡ ಎದೆ ಇದ್ದರೆ ಏನ್ ಪ್ರಯೋಜನ. ಅದರೊಳಗೆ ಬಡವರು, ನೊಂದವರ ಪರವಾಗಿ ಮಿಡಿಯುವ ಹೃದಯವೂ ಇರಬೇಕು. ನಾನು ದೇಶದ ಚೌಕೀದಾರ ಅಂತಾರೆ. ಇವರು ಚೌಕೀದಾರನೇ ಆಗಿ ದ್ದರೆ ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ ಎಲ್ಲರೂ ಯಾಕೆ ಸಾವಿರಾರು ಕೋಟಿ ರು. ಕದ್ದು ಓಡಿ ಹೋಗುತ್ತಿದ್ದರು? ಮೋದಿ ನಾಲ್ಕೂವರೆ ವರ್ಷದಲ್ಲಿ ಭಾಷಣ ಬಿಟ್ಟು ಬೇರೇನೂ ಮಾಡಿಲ್ಲ.

ಅಮಿತ್ ಶಾ ಹಾಗೂ ನಾನು ಜೊತೆಯಲ್ಲಿ ಇರುವಂತೆ ಫೋಟೋ ಮಾಡಿದ್ದಾರೆ. ಇದನ್ನು ವಾಟ್ಸ್ ಅಪ್ ನಲ್ಲಿ ಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ವಾಟ್ಸ್ ಅಪ್ ಫೋಟೋ ಸುಳ್ಳು ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ದೇಶಕ್ಕಾಗಿ ದೇಹವನ್ನೇ ಬಲಿದಾನ ಮಾಡಿದ ರಾಜಕೀಯ ನಾಯಕರಿದ್ದರೆ ಅದು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮಾತ್ರ. ಅಂಥವರು ಕಟ್ಟಿದ ಪಕ್ಷದಲ್ಲಿ ಎಂತಹ ಕುಚೋದ್ಯ, ಕುಯುಕ್ತಿ ನಡೆಯೋದಿಲ್ಲ ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ಸಿಎಂ ಸಿದ್ದರಾಮಯ್ಯ ಮುಂದೆ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಸ್ಪಷ್ಟತೆ ನೀಡಿದರು. ನಂತರ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಿ.ಧ್ರುವ ಕುಮಾರ್ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಕೇವಲ ಪ್ರತಿಪಕ್ಷಗಳ ಆರೋಪ ಅಷ್ಟೆ. ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರದ ಅಭಿವೃದ್ಧಿ ನೀಡಿದ ಸಹಕಾರವನ್ನು ಬೇರೆ ಕ್ಷೇತ್ರಗಳಿಗೆ ನೀಡಿಲ್ಲ.‌ ಯಾರೋ ಹೇಳಿದ ಮಾತನ್ನು ಕೇಳಬೇಡಿ ಎಂದು ಮನವಿ ಮಾಡಿದರು. ಚಿತ್ರ ನಟ ಸುದೀಪ್ ಚಾಮುಂಡೇಶ್ವರಿ ಪ್ರಚಾರದಿಂದ ದೂರ ಉಳಿದ ಪ್ರಶ್ನೆಗೆ, ಸುದೀಪ್ ಪ್ರಚಾರಕ್ಕೆ ಬರಬೇಕಿತ್ತು. ಅವರಿಗೆ ಬೇರೆ ಏನೇನೋ ಕೆಲಸ ಇದ್ದ ಕಾರಣಕ್ಕೆ ಪ್ರಚಾರಕ್ಕೆ ಬಂದಿಲ್ಲ ಎಂದು ಸಮಜಾಯಿಷಿ ನೀಡಿದರು.

ಉದ್ಯೋಗ ಕೇಳಿದರೆ ಪಕೋಡ ಮಾರಿ ಅಂತಾರೆ, ಟೀ ಮಾರಿ ಅಂತಾರೆ. ಆ ಉದ್ಯೋಗಗಳು ಕನಿಷ್ಠ ಅಂತ ಹೇಳಲ್ಲ. ಆದರೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಎಂದು ಹೇಳಿ ಟೀ ಮಾರಿ, ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ. ಇದೇನಾ ಇವರ ಉದ್ಯೋಗ ಸೃಷ್ಠಿ? ಎಂದು ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ನಮ್ಮ ಕಾರ್ಯಕರ್ತರು ಏನನ್ನೂ ಮಾಡಬೇಕಿಲ್ಲ. ಒಂದು ಹ್ಯಾಂಡ್‌ಬಿಲ್ ಹಿಡಿದು ಮನೆ ಬಾಗಿಲಿಗೆ ಹೋಗಿ ನಮ್ಮ ಕೆಲಸ ಹೇಳಲಿ ಸಾಕು. ಜನ ಅನ್ನ ಕೊಟ್ಟವರನ್ನ, ನೀರು ಕೊಟ್ಟವರನ್ನ, ವಸತಿ ಕೊಟ್ಟವರನ್ನ ಎಂದಿಗೂ ಕೈ ಬಿಡಲ್ಲ. ಜನ ನಮಗೆ ಮತ್ತೊಮ್ಮೆ ಆಶೀ ರ್ವಾದ ಮಾಡಿ ಅಂತ ಕೇಳಿ ಎಂದು ಕರೆ ನೀಡಿದರು.

Comments are closed.