ಕರ್ನಾಟಕ

ಯಡಿಯೂರಪ್ಪಗೆ ಹುಚ್ಚು ಹಿಡಿದಿದೆ, ಮುಂದೆ ಹುಚ್ಚು ಹೆಚ್ಚಾಗುತ್ತೆ: ಸಿದ್ದು ಟಾಂಗ್

Pinterest LinkedIn Tumblr


ಚಿತ್ರದುರ್ಗ: ರಾಜಕಾರಣ ಎಂದರೇ ದುಡ್ಡು ಮಾಡುವ ಕ್ಷೇತ್ರ ಅಲ್ಲ. ವ್ಯಾಪಾರವೂ ಅಲ್ಲ, ಉದ್ಯೋಗವೂ ಅಲ್ಲ, ರಾಜಕಾರಣ ಒಂದು ಸೇವಾ ಕ್ಷೇತ್ರ. ಈ ದೆಸೆಯಿಂದ ಯೋಗ್ಯರಾದವರು ರಾಜಕಾರಣಕ್ಕೆ ಬರಬೇಕು. ಎಂಎ, ಎಂಫಿಲ್ ಪಿಎಚ್ ಡಿ ಓದಿರೋ ಡಾ . ಯೋಗೀಶ್ ಬಾಬು ಮೊಳಕಾಲ್ಮೂರಲ್ಲಿ ಗೆಲ್ಲಬೇಕು. ಅಯೋಗ್ಯನಾದ ಶ್ರೀರಾಮುಲು ಬಳ್ಳಾರಿ ಕಡೆಗೆ ಹೋಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ನಾಯಕನಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಯೋಗೀಶ್ ಬಾಬು ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

ವಿಕ್ಟರಿ ಸಿಂಬಲ್ ಅನ್ನು ಯಡಿಯೂರಪ್ಪ ಜೈಲಿಗೋದ್ರು, ಮನೆಗೋದ್ರು ಆಸ್ಪತ್ರೆಗೋದ್ರು ಬಳಸ್ತಾರೆ. ಸಿಎಂ ಆಗಬೇಕು ಎಂದು ಹೇಳಿ ಹೇಳಿ ಯಡಿಯೂರಪ್ಪಗೆ ಹುಚ್ಚು ಹಿಡಿದಿದ, ಮುಂದೆ ಹುಚ್ಚು ಹೆಚ್ಚಾಗುತ್ತೆ. ಯಡಿಯೂರಪ್ಪ ಅವರಪ್ಪನಾಣೆ ಸಿಎಂ ಆಗಲ್ಲ. ನೀವು ಅವರನ್ನು ಸಿಎಂ ಮಾಡೋದು ಇಲ್ಲ. ಸಿಎಂ ಪ್ರಮಾಣ ವಚನ ಸ್ವೀಕರಿಸೋ ಡೇಟ್ ಫಿಕ್ಸ್ ಮಾಡ್ಕಂಡವ್ರೇ ನಾಚಿಕೆಯಾಗಬೇಕು ಎಂದರು. ಬಿಜೆಪಿ, ಜೆಡಿಎಸ್ ಗೆ ರಾಜ್ಯದಲ್ಲಿ ಶಕ್ತಿ ಇಲ್ಲ. ಉತ್ತರ ಕರ್ನಾಟಕದಲ್ಲಿ ಅವರಿಲ್ಲ. ಕರಾವಳಿಲೀ ಇವರಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರಕಾರ ನಮ್ಮದು. ಕಾಂಗ್ರೆಸ್ ಗೆ ಮತ ಹಾಕಿ. ಕೊಳ್ಳೆ ಹೊಡೆಯೋ ಶ್ರೀರಾಮುಲುನಾ ಬಿಟ್ಕಂಡ್ರೆ ಕ್ಷೇತ್ರ ಹಾಳಾಗುತ್ತದೆ. ಯೋಗೀಶ್ ಬಾಬು ಗೆಲ್ಲಿಸಿ. ಮೊಳಕಾಲ್ಮೂರು ರಕ್ಷಿಸಿ ಎಂದರು.

ನಾವೂ ರೈತರ ಸಾಲ ಮನ್ನಾ ಮಾಡಿದೆವು. ಯಡಿಯೂರಪ್ಪ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡೋ ಮಿಷನ್ ಇಲ್ಲ ಅಂತ ಹೇಳಿದ್ದು ಮರೆತಿದ್ದಾರೆ . ನರೇಂದ್ರ ಮೋದಿ ಗೆ ಸಾಲಮನ್ನ ಮಾಡೋಕೆ ಹೇಳಿದ್ರೆ ಆಗ ಯಾರೂ ತುಟಿ ಬಿಚ್ಚಲಿಲ್ಲ ಎಂದರು. ಪ್ರಧಾನಿಯಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಬಗ್ಗೆ ಲೂಸ್ ಲೂಸ್ ಮಾತಾಡಬಾರದು. ಮೋದಿ ಸರಕಾರ ತೊಂಬತ್ತು ಪರ್ಸೆಂಟ್ ಸರಕಾರ. ಮೋದಿ ಬಾಯಿ ಬಡಾಯಿ, ಸಾಧನೆ ಶೂನ್ಯ ಎಂದರು.

ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಮಾತನಾಡಿ, ಟಗರುಎಂಥದ್ದು ಎಂದು ರೆಡ್ಡಿ ಗಳಿಗೆ ಗೊತ್ತು. ರೆಡ್ಡಿ ಗೆ ಸುಗ್ಗಲಮ್ಮನ ಶಾಪ, ಯಡಿಯೂರಪ್ಪಗೆ ರೆಡ್ಡಿ ಗಳ ಶಾಪ. ಬಳ್ಳಾರಿ ಗುಡ್ಡ ಲೂಟಿ ಆಯ್ತು ಈಗ ಬಾದಾಮಿ ಲೂಟಿ ಮಾಡಲು ಬಂದಿರೋ ಶ್ರೀರಾಮುಲುಗರ ಜನರು ಬಿಡೋದಿಲ್ಲ. ಸಿದ್ದರಾಮಯ್ಯ ಅವರನ್ನು ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸ್ತಾರೆ . ಕನ್ನಡ ಮಾತೆ ಬಂಜೆ ಅಲ್ಲ ಟ್ರಜರಿಯಲ್ಲಿ ದುಡ್ ಇದೆ. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದರು.

Comments are closed.