ಕರ್ನಾಟಕ

ಜೆಡಿಎಸ್‌ ಅಭ್ಯರ್ಥಿಯ ಹತ್ಯೆಗೆ ಸ್ಕೆಚ್‌?:ಲಾಂಗ್‌ ಸಹಿತ ಆರೋಪಿ ವಶಕ್ಕೆ

Pinterest LinkedIn Tumblr


ಬೆಂಗಳೂರು: ಶಾಂತಿನಗರ ಜೆಡಿಎಸ್‌ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ಅವರ ಮನೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದುಷ್ಕರ್ಮಿಯೊಬ್ಬನನ್ನು ಲಾಂಗ್‌ ಸಮೇತ ಪೊಲೀಸರು ವಶಕ್ಕೆ ಪಡೆದ ಆತಂಕಕಾರಿ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಬಂಧಿತ ಆರೋಪಿ ಫ‌ಜರ್‌ ಖಾನ್‌ ಎಂಬಾತನಾಗಿದ್ದು ಈತ ಶ್ರೀಧರ್‌ ರೆಡ್ಡಿ ಅವರು ಯಾವಾಗ ಮನೆಗೆ ಬರುತ್ತಾರೆ ಎಂದು ವಿಚಾರಿಸಿದ್ದಾರೆ. ಬಳಿಕ ಮನೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ.

ಕೂಡಲೇ ಅಲ್ಲಿದ್ದ ಶ್ರೀಧರ್‌ ರೆಡ್ಡಿ ಬೆಂಬಲಿಗರು ಆತನನ್ನು ಹಿಡಿದು ವಿಚಾರಿಸಿದಾಗ ಆತನ ಸ್ಕೂಟರ್‌ನಲ್ಲಿ ಲಾಂಗ್‌ ಮತ್ತು ಗಾಂಜಾ ಪತ್ತೆ ಯಾಗಿದೆ.

ಈತ ಶ್ರೀಧರ್‌ ರೆಡ್ಡಿ ಅವರ ಹತ್ಯೆಗೆ ಸ್ಕೆಚ್‌ ಹಾಕಿದ್ದನೆ ಎಂಬ ಸಂಶಯ ಮೂಡಿದೆ.

ಅಶೋಕನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದು, ಈ ಬಗ್ಗೆ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ತೀವ್ರ ಆತಂಕ ವ್ಯಕ್ತ ಪಡಿಸಿದ್ದಾರೆ.

-ಉದಯವಾಣಿ

Comments are closed.