ಕರ್ನಾಟಕ

ಬೆಂಗಳೂರಿಗೆ ಕಾಂಗ್ರೆಸ್‌ ಪ್ರತ್ಯೇಕ ಪ್ರಣಾಳಿಕೆ

Pinterest LinkedIn Tumblr


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಹತ್ತು ವರ್ಷದಲ್ಲಿ ಜನರಿಂದ ನೇರವಾಗಿ ಬಿಬಿಎಂಪಿ ಮೇಯರ್‌ ಆಯ್ಕೆ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ನಗರದಲ್ಲಿಯೂ ಹೆಚ್ಚಿನ ಸ್ಥಾನ ಪಡೆಯುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ 1 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟು ವಿಶ್ವ ದರ್ಜೆಯ ಮೂಲ ಸೌಕರ್ಯ ಕಲ್ಪಿಸುವುದಾಗಿ ಹೇಳಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ವೈಟ್‌ ಟಾಪಿಂಗ್‌ ಯೋಜನೆಯನ್ನು ಪ್ರಮುಖ ರಸ್ತೆಗಳಿಗೆ ವಿಸ್ತರಿಸುವುದು, ಸಂಚಾರಿ ದಟ್ಟಣೆ ತಪ್ಪಿಸಲು ಮೇಲ್ಸೇತುವೆಗಳ ನಿರ್ಮಾಣ, ಸುಮಾರು 2 ಸಾವಿರ ಕಿಲೋ ಮೀಟರ್‌ ಪಾದಚಾರಿ ರಸ್ತೆ ನಿರ್ಮಾಣ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.ಮಹಾನಗರ ಪಾಲಿಕೆಯ ಆಡಳಿತ ಸುಧಾರಣೆಯ ಬಗ್ಗೆಯೂ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಣಾಳಿಕೆಯ ಪ್ರಮುಖ ಆಂಶಗಳು
-ನಗರ ಆರ್ಥಿಕ ಅಭಿವೃದ್ಧಿ ಸಂಸ್ಥೆ ಸ್ಥಾಪನೆ.
-ನಗರ ಹೊರ ವಲಯಕ್ಕೆ ಮೆಟ್ರೋ ಯೋಜನೆ ವಿಸ್ತರಣೆ.
-ಜಂಕ್ಸನ್‌ಗಳ ಬಳಿ ಸ್ಕೈವಾಕ್‌ಗಳ ನಿರ್ಮಾಣ.
-ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಕಸ ಸಂಸ್ಕರಣಾ ಘಟಕ ಸ್ಥಾಪನೆ.
-ಪ್ರತಿ ಕುಟುಂಬಕ್ಕೆ 135 ಎಂಎಲ್‌ಡಿ ಕುಡಿಯುವ ನೀರು.
-ಲಕ್ಷ್ಮಣರಾವ್‌ ವರದಿ ಪ್ರಕಾರ ಕೆರೆಗಳ ಅಭಿವೃದ್ಧಿ.
-ಬೆಂಗಳೂರಿನಿಂದ 100 ಕಿ.ಮಿ. ವ್ಯಾಪ್ತಿಯ ನಗರಗಳಿಗೆ ಸಬರ್‌ಬನ್‌ ರೈಲು.
-ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯವಿಲೇವಾರಿ ನಿರ್ವಹಣಾ ಘಟಕ ಕಡ್ಡಾಯ.
-ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಕಾವೇರಿ 5ನೇ ಹಂತದ ಯೋಜನೆ ತ್ವರಿತಗೊಳಿಸುವುದು.
-ಶರಾವತಿ, ಮೇಕೆದಾಟು, ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರು.
-ಪ್ರತಿ ವಾರ್ಡ್‌ನಲ್ಲಿಯೂ ವಿಕೇಂದ್ರಿಕೃತ ಇ-ತ್ಯಾಜ್ಯ ಘಟಕ ಸ್ಥಾಪನೆ.
-ಸಧೃಡ ಪ್ರವಾಹ ನಿರ್ವಹಣಾ ಯೋಜನೆ ರೂಪಿಸುವುದು.
-ದಶಕದ ಒಳಗೆ ಮೇಯರ್‌ ನೇರ ಆಯ್ಕೆಗೆ ಅವಕಾಶ ಕಲ್ಪಿಸುವುದು.
-2 ಸಾವಿರ ಕಿ.ಮೀ. ಕಾಲು ದಾರಿ ನಿರ್ಮಾಣ.
-ಐದು ವರ್ಷಗಳಲ್ಲಿ ಎಲ್ಲ ಕೆರೆಗಳನ್ನು ಮಾಲಿನ್ಯ ಮುಕ್ತ ಮಾಡುವುದು.
-ನಗರದ ಬಡವರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ.

-ಉದಯವಾಣಿ

Comments are closed.