ಕರ್ನಾಟಕ

ಚುನಾವಣಾ ಪ್ರಣಾಳಿಕೆಯಲ್ಲಿ ಬಿಗ್ ಮಿಸ್ಟೇಕ್ : ‘ಕೈ’ ಮುಜುಗರ

Pinterest LinkedIn Tumblr


ಬೆಂಗಳೂರು/ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಣಿಕೆ ಯನ್ನು ಈಗಾಗಲೇ ಬಿಡುಗಡೆ ಮಾಡಿ ದ್ದರೂ, ಅದರಲ್ಲಿ ಕಂಡುಬಂದ ತಪ್ಪುಗಳಿಂದಾಗಿ, ಇದೀಗ ಪಕ್ಷದ ರಾಜ್ಯ ಘಟಕ ತೀವ್ರ ಮುಜುಗರ ಅನುಭವಿಸುವಂತಾ ಗಿದೆ.

ಇಂಗ್ಲಿಷ್ ಹಾಗೂ ಕನ್ನಡ ಅವತರಣಿಕೆಯ ಪ್ರಣಾಳಿಕೆಯಲ್ಲ ಕಂಡುಬಂದ ತಪ್ಪಿನಿಂದ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ಚುನಾ ವಣಾ ಪ್ರಣಾಳಿಕೆಯ ಮುಖ್ಯಸ್ಯ ವೀರಪ್ಪ ಮೊಯ್ಲಿ ಎಚ್ಚೆತ್ತುಕೊಂಡು, ಮರು ಮುದ್ರಣ ಮಾಡಿಸಲಾಗುವುದು ಎಂದು ತಿಳಿಸಿ ದ್ದಾರೆ.

ಕಾಂಗ್ರೆಸ್ ನ ಇಂಗ್ಲಿಷ್ ಅವತರಣಿಕೆಯಲ್ಲಿ ಮಾಂಗಲ್ಯ ಭಾಗ್ಯದ ಪ್ರಸ್ತಾಪವಾಗಿದ್ದು, ಕನ್ನಡ ಅವತರಣಿಕೆಯಲ್ಲಿ ಇದರ ಪ್ರಸ್ತಾಪವೇ ಇಲ್ಲದಿರುವುದು ಹಾಗೂ ಇನ್ನಿತರ ತಪ್ಪುಗಳು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ.

Comments are closed.