ಕರ್ನಾಟಕ

ಆಪ್ ಪರ ಪ್ರಚಾರಕ್ಕಿಳಿದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

Pinterest LinkedIn Tumblr

ಬೆಂಗಳೂರು: ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಈ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಪರ ಪ್ರಚಾರಕ್ಕಿಳಿದಿದ್ದಾರೆ.

ಆಪ್ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿರುವ ಸಂತೋಷ್ ಹೆಗ್ಡೆ ಸರ್ವಜ್ಞನಗರ, ಕಲ್ಯಾಣನಗರ, ಎಚ್‌ಆರ್‌ಬಿಆರ್‌ ಬಡಾವಣೆ ಸೇರಿ ಅನೇಕ ಕಡೆ ಪ್ರಚಾರದಲ್ಲಿ ತೊಡಗಿದ್ದಾರೆ.

ಭ್ರಷ್ಠಾಚಾರದ ವಿರುದ್ಧ ಸತತ ಹೋರಾಡುತ್ತಾ ಬಂದಿರುವ ಸಂತೋಷ್ ಹೆಗ್ಡೆ ಆಪ್ ಪರ ಪ್ರಚಾರ ಕೈಗೊಂಡಿರುವುದು ಆ ಪಕ್ಷದ ಅಭ್ಯರ್ಥಿಗಳಲ್ಲಿ ನೈತಿಕ ಬಲ ತುಂಬಿದೆ.

ತಮ್ಮ ಅಧಿಕಾವಧುಇಯಲ್ಲಿ ಭ್ರಷ್ಠ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ನ್ಯಾಯಮೂರ್ತಿಗಳು ಈಗಲೂ ಸಹ ಅನೇಕ ಸಮಾಜ ಕಲ್ಯಆಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕವನ್ನು ಭ್ರಷ್ಠಾಚಾರ ಮುಕ್ತಗೊಳಿಸಬೇಕು ಎನ್ನುವ ಮಹೋದ್ದೇಶದೊಡನೆ ಅವರು ಈ ಬಾರಿ ಚುನಾವಣೆ ಪ್ರಚಾರ ಕಾರ್ಯಕ್ಕೆ ತೊಡಗಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.ಇದರಲ್ಲಿ ಬೆಂಗಳೂರು ಮಹಾನಗರದ 11 ಕ್ಷೇತ್ರಗಳು ಸೇರಿದ್ದು ಇಲ್ಲೆಲ್ಲಾ ಸಂತೋಷ್ ಹೆಗ್ಡೆ ಪ್ರಚಾರ ಕೈಗೊಳ್ಳಲಿದ್ದಾರೆ.

Comments are closed.