ಕರಾವಳಿ

ನಾಳೆ ಮಂಗಳೂರಿನಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶುಭಾರಂಭ

Pinterest LinkedIn Tumblr

ಮಂಗಳೂರು: ಪ್ರಸಾದ್ ನೇತ್ರಾಲಯದ ವತಿಯಿಂದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಎಪ್ರಿಲ್,29ರಂದು ನಗರದ ಉಜ್ಜೋಡಿ -ಪಂಪ್‌ವೆಲ್ ಬಳಿಯ ಸುಸಜ್ಜಿತ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸರಕಾರದ ಆಯುಷ್ ಸಚಿವ ಶ್ರೀಪಾದ ನಾಯಕ್ ಎ.29ರಂದು ಸಂಜೆ 6:15ಕ್ಕೆ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಕ್ರೈಸ್ತ ಧರ್ಮಗುರು ಫಾ.ಗಾಡ್‌ಫ್ರಿ ಎಲ್.ಎ.ಸಲ್ದಾನಾ, ಮುಸ್ಲಿಂ ಧಾರ್ಮಿಕ ಮುಖಂಡ ಅಬೂ ಸುಫಿಯಾನ್ ಮದನಿ, ಉಡುಪಿಯ ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಉದ್ಛಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭಾಸಂಶನೆ ಮಾಡಲಿದ್ದಾರೆ. .ಸಂಸದ ಆಸ್ಕರ್ ಫೆರ್ನಾಂಡಿಸ್, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ಮತ್ತು ಡಾ.ಎಚ್.ಎಸ್.ಬಲ್ಲಾಳ್, ಡಾ.ವಿನಯ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಲಿದ್ದರೆ.ಶಾಸಕ ಜೆ.ಆರ್.ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಮೇಯರ್ ಭಾಸ್ಕರ್ ಮೊಯ್ಲಿ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಉದ್ಯಮಿ ಬಿ.ಎಂ.ಫಾರೂಕ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ವೈದ್ಯಕೀಯ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್ ಕೂಡ್ಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಸಾದ್ ನೇತ್ರಾಲಯದ ಪಾಲುದಾರರು ಹಾಗೂ ನೇತ್ರ ತಜ್ಞರಾದ ಡಾ.ವಿಕ್ರಮ್ ಜೈನ್, ಡಾ.ಚಿನ್ನಪ್ಪ ಎ.ಜಿ., ಡಾ.ಹರೀಶ್ ಶೆಟ್ಟಿ, ಡಾ.ಜೇಕಬ್ ಚಾಕೋ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥೆಯ 5ನೇ ಕೇಂದ್ರ :

ಪ್ರಸಾದ್ ನೇತ್ರಾಲಯವು 2012ರಿಂದ ಮಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರಸಾದ್ ನೇತ್ರಾಲಯ ಆಸ್ಪತ್ರೆಯ ಮೂಲಕ ಕಣ್ಣಿನ ಚಿಕಿತ್ಸೆ ನೀಡುತ್ತಾ ಬಂದಿದೆ. ಉಜ್ಜೋಡಿಯಲ್ಲಿ ಆರಂಭಿಸಲಾಗುವ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥೆಯ 5ನೇ ಕೇಂದ್ರವಾಗಿದೆ. ಇಲ್ಲಿ ದಿನದ 24 ಗಂಟೆಯೂ ಚಿಕಿತ್ಸಾ ಸೌಲಭ್ಯ ಇರಲಿದೆ. ರಾಜ್ಯದ ಕೆಲವೇ ಕಡೆಗಳಲ್ಲಿ ಇರುವ ಕಣ್ಣಿನ ವಿಶೇಷ ಚಿಕಿತ್ಸೆ ನೀಡುವ ತಜ್ಞರನ್ನು ಪ್ರಸಾದ್ ನೇತ್ರಾಲಯ ತಂಡ ಹೊಂದಿದೆ. ಒಂದೇ ಸೂರಿನಡಿ ಅತ್ಯುತ್ತಮ ನೇತ್ರ ಚಿಕಿತ್ಸೆ ಮಂಗಳೂರಿನಲ್ಲಿ ದೊರಕಲಿದೆ ಎಂದು ಡಾ.ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

Comments are closed.