ಅಂತರಾಷ್ಟ್ರೀಯ

ಕರ್ನಾಟಕ ಚುನಾವಣೆ: ಮತದಾನ ನನ್ನ ಹಕ್ಕು: ವಿಜಯ್‌ ಮಲ್ಯ

Pinterest LinkedIn Tumblr


ಲಂಡನ್‌ : 9,000 ಕೋಟಿ ರೂ.ಬ್ಯಾಂಕ್‌ ಸಾಲ ವಂಚನೆಗೈದು ವಿದೇಶಕ್ಕೆ ಪಲಾಯನ ಮಾಡಿರುವ ಅನಿವಾಸಿ ಭಾರತೀಯ ಉದ್ಯಮಿ, ಮದ್ಯ ದೊರೆ, ವಿಜಯ್‌ ಮಲ್ಯ, ಕರ್ನಾಟಕದಲ್ಲಿ ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು ಎಂದು ಗುಡುಗಿದ್ದಾರೆ. ಆದರೆ ಹಾಲಿ ಪರಿಸ್ಥಿತಿಯಲ್ಲಿ ನಾನು ಮತದಾನ ಮಾಡಲು ನನಗೆ ಸಾಧ್ಯವಾಗದು ಎಂದು ವಿಷಾದಿಸಿದ್ದಾರೆ !

ವಿಜಯ್‌ ಮಲ್ಯ ಅವರು ಇಂಗ್ಲಂಡ್‌ ಗೆ ಪಲಾಯನ ಮಾಡಿದ್ದು ಅಲ್ಲಿನ ವೆಸ್ಟ್‌ ಮಿನಿಸ್ಟರ್‌ ನ್ಯಾಯಾಲಯ, ಮಲ್ಯ ಅವರನ್ನು ಬ್ಯಾಂಕ್‌ ಸಾಲ ವಂಚನೆಗಾಗಿ ವಿಚಾರಣೆಗೆ ಒಳಪಡಲು ಭಾರತಕ್ಕೆ ಗಡೀಪಾರು ಮಾಡುವ ವಿಷಯದಲ್ಲಿ ತೀರ್ಪು ನೀಡಲು ಸಜ್ಜಾಗಿದೆ. ಮಲ್ಯ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ 62ರ ಹರೆಯದ ಮಲ್ಯ ಅವರು, “ನಾನು ಕರ್ನಾಟಕದ ರಾಜಕಾರಣವನ್ನು ತಿಳಿದಿಲ್ಲ; ಹಾಗಾಗಿ ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ; ಹಾಗಿದ್ದರೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕಾಗಿದೆ; ಆದರೆ ಈಗಿನ ಪರಿಸ್ಥಿತಿಯಲ್ಲಿ ಮತದಾನ ಮಾಡುವುದು ನನಗೆ ಸಾಧ್ಯವಾಗದು’ ಎಂದು ಹೇಳಿದರು.

-ಉದಯವಾಣಿ

Comments are closed.