ಕರ್ನಾಟಕ

ಟಿಕೆಟ್‌ ಕೈತಪ್ಪಿದ ಆಘಾತದಿಂದ ಜೆಡಿಎಸ್‌ ಶಾಸಕನ ತಂದೆ ಸಾವು

Pinterest LinkedIn Tumblr


ಶಿಡ್ಲಘಟ್ಟ: ಟಿಕೆಟ್‌ ಕೈ ತಪ್ಪಿದ ಅಘಾತದಲ್ಲಿ ತೀವ್ರವಾಗಿ ನೊಂದಿದ್ದ ಜೆಡಿಎಸ್‌ ಎಂ.ಶಾಸಕ ರಾಜಣ್ಣ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಕೊನೆ ಕ್ಷಣದಲ್ಲಿ ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್‌ ತಪ್ಪಿಸಿ ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ಅವರಿಗೆ ನೀಡಲಾಗಿತ್ತು. ಆ ಬಳಿಕ ರಾಜಣ್ಣ ತಂದೆ 79 ರ ಹರೆಯದ ಎಂ.ಪಿ.ಮುನಿಯಪ್ಪ ಅವರು ಯಾರ ಬಳಿಯೂ ಮಾತನಾಡುತ್ತಿರಲಿಲ್ಲವಂತೆ . ತೀವ್ರ ವಾಗಿ ನೊಂದಿದ್ದ ಅವರು ಕೊರಗಿನಲ್ಲೇ ಇಂದು ಕೊನೆಯುಸಿರೆಳೆದಿದ್ದಾರೆ.

ಟಿಕೆಟ್‌ ಸಿಗದ ನೋವಿನಲ್ಲಿದ್ದ ಶಾಸಕ ರಾಜಣ್ಣ, ಕುಟುಂಬ ಮತ್ತು ಬೆಂಬಲಿಗರು ಇದೀಗ ಹಿರಿಯರ ಸಾವಿನಿಂದ ಇನ್ನಷ್ಟು ದುಃಖೀತರಾಗಿದ್ದಾರೆ.

-ಉದಯವಾಣಿ

Comments are closed.