ರಾಷ್ಟ್ರೀಯ

ಛತ್ತೀಸ್‌ಗಢ : ಭದ್ರತಾ ಪಡೆಗಳಿಂದ 7 ನಕ್ಸಲರ ಹತ್ಯೆ

Pinterest LinkedIn Tumblr


ಬಿಜಾಪುರ, ಛತ್ತೀಸ್‌ಗಢ : ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಇಂದು ನಡೆದ ಭೀಕರ ಗುಂಡಿನ ಕಾಳಗದಲ್ಲಿ ಏಳು ನಕ್ಸಲರು ಹತರಾದರು.

ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರ – ಛತ್ತೀಸ್‌ಗಢ – ತೆಲಂಗಾಣ ಗಡಿಯಲ್ಲಿ ಹತರಾಗಿರುವ ನಕ್ಸಲರ ಸಂಖ್ಯೆ ಈಗ 44ಕ್ಕೇರಿದೆ.

ಕಳೆದ ಹತ್ತು ದಿನಗಳಿಂದ ಬಿಜಾಪುರದ ದಟ್ಟಾರಣ್ಯದಲ್ಲಿ ಜಂಟಿ ಕಾರ್ಯಪಡೆ ನಕ್ಸಲರಿಗಾಗಿ ವ್ಯಾಪಕ ಶೋಧ ಕಾರ್ಯ ಕೈಗೊಂಡಿತ್ತು. ಇಂದು ಬೆಳಗ್ಗೆ ಇಪೆಂಟಾ ಗ್ರಾಮದ ಕಾಡಿನ ಬಳಿ ನಕ್ಸಲರು ಯೋಧರ ಮೇಲೆ ಗುಂಡೆಸೆತದಲ್ಲಿ ತೊಡಗಿದರು. ನಕ್ಸಲರ ದಾಳಿಯಲ್ಲಿ ಕೆಲವು ಯೋಧರು ಗಾಯಗೊಂಡರು; ಪ್ರತೀಕಾರದ ದಾಳಿಯಲ್ಲಿ ಯೋಧರ ಗುಂಡಿಗೆ ಏಳು ನಕ್ಸಲರು ಹತರಾದರು.

-ಉದಯವಾಣಿ

Comments are closed.