ಕರ್ನಾಟಕ

ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ; ಯಶವಂತಪುರದಿಂದ ನಟ ಜಗ್ಗೇಶ್ ಸ್ಪರ್ಧೆ

Pinterest LinkedIn Tumblr

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದ್ದು, ಯಶವಂತಪುರ ಸೇರಿದಂತೆ ಕುತೂಹಲ ಮೂಡಿಸಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ.

ಯಶವಂತಪುರದಿಂದ ನಟ ಜಗ್ಗೇಶ್, ಕನಕಪುರದಿಂದ ನಂದಿನಿ ಗೌಡ ಅವರನ್ನು ಆಯ್ಕೆ ಮಾಡಲಾಗಿದ್ದು ನಾಲ್ಕನೇ ಪಟ್ಟಿಯಲ್ಲಿ ಒಟ್ಟು ಏಳು ಮಂದಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿ, ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿ, ಮೂರನೇ ಪಟ್ಟಿಯಲ್ಲಿ 60 ಅಭ್ಯರ್ಥಿ ಹಾಗೂ ನಾಲ್ಕನೇ ಪಟ್ಟಿಯಲ್ಲಿ 7 ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದೆ.

ಇನ್ನು ವರುಣ ಸೇರಿದಂತೆ 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
ಯಶವಂತಪುರ-ಜಗ್ಗೇಶ್
ಕನಕಪುರ-ನಂದಿನಿ ಗೌಡ
ಭದ್ರಾವತಿ-ಜಿಆರ್ ಪ್ರವೀಣ್ ಪಾಟೀಲ್
ಬಿಟಿಎಂ ಲೇಔಟ್-ಲಲ್ಲೇಶ್ ರೆಡ್ಡಿ
ರಾಮನಗರ-ಎಚ್ ಲೀಲಾವತಿ
ಬೇಲೂರು-ಎಚ್ ಕೆ ಸುರೇಶ್
ಹಾಸನ-ಜೆ ಪ್ರೀತಂ ಗೌಡ

Comments are closed.