ಕರಾವಳಿ

ಕುಂದಾಪುರ ಕ್ಷೇತ್ರದ ಜೆಡಿ‌ಎಸ್ ಅಭ್ಯರ್ಥಿ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಕುಂದಾಪುರ: ಜೆಡಿ‌ಎಸ್ ಕುಂದಾಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಪ್ರಕಾಶ ಶೆಟ್ಟಿ ತೆಕ್ಕಟ್ಟೆ ಸೋಮವಾರ ಮಧ್ಯಾಹ್ನ ಕುಂದಾಪುರದ ಮಿನಿವಿಧಾನ ಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಭೂಬಾಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಬೆಂಬಲಿಗರ ಜೊತೆ ಆಗಮಿಸಿದ ಅವರು ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿ, ಇಂದಿನಿಂದ ಕ್ಷೇತ್ರದ ಎಲ್ಲಾ ಭಾಗಗಳಿಗೆ ಮನೆಮನೆ ಪ್ರಚಾರ ಕಾರ್ಯ ಆರಂಭಿಸುವೆ. ಕುಮಾರಸ್ವಾಮಿಯವರ ಪ್ರಣಾಳಿಕೆಯ ವಿವರಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುವೆ. ಚುನಾವಣೆ ಸಂದರ್ಭ ಮಾತ್ರ ಜನರನ್ನು ತಲುಪುವ ಸಂಪ್ರದಾಯ ಬಿಟ್ಟು ನಿರಂತರ ಮತದಾರರ ಸಂಪರ್ಕದಲ್ಲಿರುವ ಪ್ರಯತ್ನ ಮಾಡುವೆ ಎಂದರು.

ಕುಂದಾಪುರ ಕ್ಷೇತ್ರ ಬಿಜೆಪಿಯಲ್ಲಿನ ಭಿನ್ನಮತಿಯರ ಕೆಲವರನ್ನು ಸಂಪರ್ಕ ಮಾಡುವ ಕಾರ್ಯ ಮಾಡಿದ್ದು ಮುಂದಿನ ದಿನದಲ್ಲಿಯೂ ಅವರನ್ನು ಸಂಪರ್ಕಿಸುವ ಕಾರ್ಯ ಮಾಡುವೆ. ಅವರ ಬೆಂಬಲ ಹಾಗೂ ಸಹಕಾರ ಪಡೆಯುವ ಇರಾದೆಯಿದೆ. ಅವರು ಕೂಡ ಬೆಂಬಲ ಸೂಚಿಸುವ ವಿಶ್ವಾಸವಿದೆ ಎಂದರು.

ಈ ಸಂದರ್ಭ ಜಿಲ್ಲಾ ಜೆಡಿ‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿಲೇಶ್ ಶೆಟ್ಟಿ, ರಾಜ್ಯ ಮುಖಂಡ ಶ್ರೀಕಾಂತ ಅಡಿಗ, ಜಿಲ್ಲಾಧ್ಯಕ್ಷ ಕಾಪು ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಚುನಾವಣಾ ವೀಕ್ಷಕ ಸುಧಾಕರ ಶೆಟ್ಟಿ, ಅಲ್ಪ ಸಂಖ್ಯಾತ ಘಟಕದ ಮುಖಂಡ ಮನ್ಸೂರ್ ಮರವಂತೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ್ ಟಿ.ಟಿ. ರೋಡ್, ಮಹಿಳಾ ಮುಖಂಡರಾದ ವೇದಾವತಿ ಹೆಗ್ಡೆ, ಪೂರ್ಣಿಮಾ ನಾಯಕ್, ಎಸ್ಸಿ ಎಸ್ಟಿ ಘಟಕಾಧ್ಯಕ್ಷ ಸಚಿನ್ ಉಡುಪಿ, ಯುವ ಘಟಕದ ಜಿಲ್ಲಾಧ್ಯಕ್ಷ ರೋಹಿತ್ ಕರಂಬಳ್ಳಿ, ಬೈಂದೂರು ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ, ಮುಖಂಡರಾದ ಶೇಖರ್ ಕೋಟ್ಯಾನ್, ಸಂದೇಶ್ ಭಟ್ ಬೈಂದೂರು, ರಝಾಕ್, ರವಿರಾಜ ಸಾಲಿಯಾನ್, ಅಬ್ದುಲ್ ಖಾದರ್ ಕುಂಜಾಲು ಮೊದಲಾದವರು ಇದ್ದರು.

Comments are closed.