ಕ್ರೀಡೆ

‘ಈ ಸಲ ಕಪ್‌ ನಮ್ದೆ ಗುರು’: ಕೆ.ಎಲ್‌.ರಾಹುಲ್‌ ವೈರಲ್ ಆದ ವೀಡಿಯೊ

Pinterest LinkedIn Tumblr

ಬೆಂಗಳೂರು: ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದಲ್ಲಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌ ‘ಈ ಸಲ ಕಪ್‌ ನಮ್ದೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಶನಿವಾರ ನಡೆದಿದ್ದ ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರಾಹುಲ್‌ ‘ಪಂದ್ಯ ಶ್ರೇಷ್ಠ’ ಗೌರವ ಗಳಿಸಿದ್ದರು.

ಪಂದ್ಯ ಮುಗಿದ ನಂತರ ಕಿಂಗ್ಸ್‌ ಇಲೆವನ್‌ ತಂಡದಲ್ಲಿರುವ ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್‌ ನಾಯರ್‌, ಡ್ರೆಸಿಂಗ್‌ ಕೊಠಡಿಯಲ್ಲಿದ್ದ ರಾಹುಲ್‌ ಅವರ ಅಭಿಪ್ರಾಯ ಕೇಳುತ್ತಾರೆ. ಆಗ ರಾಹುಲ್‌ ‘ಈ ಸಲ ಕಪ್‌ ನಮ್ದೆ ಗುರು. ಎಲ್ಲರಿಗೂ ಹೇಳಿ ಬಿಡು’ ಎನ್ನುತ್ತಾರೆ. ಆಗ ಕರುಣ್‌ ಕೂಡಾ ನಗುತ್ತಾ ‘ಕಪ್‌ ನಮ್ದೆ’ ಎಂದು ಧ್ವನಿಗೂಡಿಸುತ್ತಾರೆ.

‘ಈ ಸಲ ಕಪ್‌ ನಮ್ದೆ’ ಎಂಬುದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಘೋಷ ವಾಕ್ಯ. ಹಿಂದಿನ ಆವೃತ್ತಿಯಲ್ಲಿ ರಾಹುಲ್‌ ಆರ್‌ಸಿಬಿ ಪರ ಆಡಿದ್ದರು. ಈ ಬಾರಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆಟಗಾರರ ಹರಾಜಿನಲ್ಲೂ ಅವರನ್ನು ಆರ್‌ಸಿಬಿ ಫ್ರಾಂಚೈಸ್‌ ಖರೀದಿಸಿರಲಿಲ್ಲ.

Comments are closed.