ಕರಾವಳಿ

ಬೈಂದೂರು ಕ್ಷೇತ್ರದ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಯಾಚನೆ: ನಾಮಪತ್ರ ಸಲ್ಲಿಸಿ ಗೋಪಾಲ ಪೂಜಾರಿ

Pinterest LinkedIn Tumblr

ಕುಂದಾಪುರ: ನಾಲ್ಕು ಬಾರಿ ಶಾಸಕನಾದ ಬಳಿಕ ಬೈಂದೂರು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಿಳಿದಿದ್ದು ಈ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತೇವೆ. ಮತ್ತು ಮುಂದಿನ ಸಾಧನೆಗಳನ್ನು ಹೇಳಿ ಮತ ಯಾಚನೆ ಮಾಡುತ್ತೇವೆ. ಮುಖ್ಯಮಂತ್ರಿಗಳ ಹಿಂದಿನ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಇಂದಿನಿಂದ ಅಧಿಕೃತ ಮತಯಾಚನೆ ನಿತ್ಯ ನಡೆಯಲಿದ್ದು ಬಹಿರಂಗ ಸಭೆಗಳನ್ನು ನಡೆಸಲಾಗುತ್ತದೆ. ಚುನಾವಣಾ ಪ್ರಚಾರದ ಸಲುವಾಗಿ ಉಡುಪಿ ಜಿಲ್ಲೆಗೆ ಹಲವಾರು ನಾಯಕರು ಆಗಮಿಸುತ್ತಿದ್ದು ನಮ್ಮ ಕ್ಷೇತ್ರಕ್ಕೂ ಬರಲಿದ್ದಾರೆಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳೀದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಬೆಂಬಲಿಗರ ಜೊತೆ ತೆರಳಿದ ಅಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು.

ಬೈಂದೂರಿನಲ್ಲಿ ಹಲವು ನದಿಗಳ ನೀರು ಸಮುದ್ರ ಸೇರುತ್ತಿದೆ. ನದಿಗಳಿಗೆ ವೆಂಟೆಂಡ್ ಡ್ಯಾಮ್ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಆಧ್ಯತೆ ನೀಡುವುದು, ಶಿರೂರಿನಲ್ಲಿ ಪ್ರಯೋಗ ಮಾಡುತ್ತಿರುವ ಉಪ್ಪು ನೀರು ಪಿಲ್ಟರ್ ಮಾಡುವ ಯೋಜನೆ ಯಶಸ್ವಿಯಾದಲ್ಲಿ ಕರಾವಳಿಯ ಪ್ರತಿ ಮನೆಗೂ ಕುಡಿಯುವ ನೀರಿನ ಪೂರೈಕೆ ಕಾರ್ಯವಾಗಲಿದೆ. ಇದು ನನ್ನ ಮುಂದಿನ ಗುರಿಯಾಗಿದೆ ಎಂದರು.

ಪ್ರಾಕೃತಿಕ ವಿಕೋಪದ ಬಗ್ಗೆ ಮಾತನಾಡಿದ ಅವರು ಕರವಳಿ ಭಾಗದಲ್ಲಿ ವಾಸಿಸುವ ಜನರಿಗೆ ಸುರಕ್ಷಿತವಾಗಿ ಬದುಕಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಂಬಂದಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಮುಖಂಡರಾದ ರಾಜು ಪೂಜಾರಿ, ರಾಜು ದೇವಾಡಿಗ ತ್ರಾಸಿ, ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಇದ್ದರು.

ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿ ಕಚೇರಿ ಹೊರಭಾಗದಲ್ಲಿ ನೂರಾರು ಮಂದಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೆರೆದಿದ್ದರು.

Comments are closed.