
ಮೈಸೂರು: ನಾನು ಅಂಬರೀಷ್ ಅವರ ಮನವೊಲಿಸಲು ಯಾವುದೇ ಮಾತುಕತೆ ನಡೆಸಲು ಮುಂದಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ನೀವು ಯಾಕೆ ಇದ್ದನ್ನು ವಿಷ್ಯ ಮಾಡುತ್ತೀರಿ. ಬಿ ಫಾರಂ ನೀಡುವುದು ನಾನಲ್ಲ, ಪಕ್ಷದ ಅಧ್ಯಕ್ಷರು. ಅಂಬರೀಷ್ ಅವರಿಗೆ ಟಿಕೆಟ್ ನೀಡಿದ್ದೇವೆ ಅವರು ಸ್ಪರ್ಧೆ ಮಾಡಬೇಕು ಅಷ್ಟೇ’ ಎಂದರು.
ನನಗೆ ಬಾದಾಮಿ ಬೇಕಂತಿಲ್ಲ!
ನನಗೆ ಬಾದಾಮಿಯಲ್ಲಿ ಸ್ಪರ್ಧಿಸಲೇಬೇಕೆಂದೇನಿಲ್ಲ, ಅಲ್ಲಿನ ಕಾರ್ಯಕರ್ತರು, ಮುಖಂಡರ ಒತ್ತಡವಿದೆ. ಈ ಬಗ್ಗೆ ಚರ್ಚಿಸಿ ತಿಳಿಸುತ್ತೇನೆ ಎಂದರು.
-ಉದಯವಾಣಿ
Comments are closed.