ರಾಷ್ಟ್ರೀಯ

ದಯಾಮರಣ ಅವಕಾಶ ಪಡೆದಿದ್ದ ಆನೆ ರಾಜೇಶ್ವರಿ ಅನಾರೋಗ್ಯದಿಂದ ಸಾವು

Pinterest LinkedIn Tumblr


ಸೇಲಂ: ಇಲ್ಲಿನ ಸುಗವಣೇಶ್ವರ್‌ ದೇವಾಲಯದಲ್ಲಿದ್ದ ಅನಾರೋಗ್ಯಪೀಡಿತ ಆನೆ ರಾಜೇಶ್ವರಿಯ ದಯಾಮರಣಕ್ಕೆ ಮದ್ರಾಸ್‌ ಹೈಕೋರ್ಟ್‌ ಅವಕಾಶ ನೀಡಿದ ಐದನೇ ದಿನಕ್ಕೆ ಅದು ಅನಾರೋಗ್ಯದಿಂದಲೇ ಮೃತಪಟ್ಟಿದೆ.

43 ವರ್ಷದ ಆನೆ ರಾಜೇಶ್ವರಿಯ ಒಂದು ಕಾಲು ಕೆಲವು ವರ್ಷಗಳ ಹಿಂದೆ ಮುರಿದ್ದು, ಕಳೆದ ಒಂದು ವರ್ಷದಿಂದ ಅದರ ಎಡ ಮೊಣಕಾಲಿನ ನೋವು ತೀವ್ರಗೊಂಡು ಜೀವನ್ಮರಣ ಹೋರಾಟದಲ್ಲಿತ್ತು. ಯಾವುದೇ ಚಿಕಿತ್ಸೆ ಕೂಡ ಪರಿಣಾಮ ಬೀರುತ್ತಿರಲಿಲ್ಲ. ಕೆಲವು ತಿಂಗಳಿಂದ ಮಲಗಿದಲ್ಲಿಯೇ ಇದ್ದು, ಹುಣ್ಣುಗಳೂ ಆಗಿತ್ತು. ಆನೆಯನ್ನು ಈ ಸಹಿಸಲಾಗದ ನೋವಿನಿಂದ ಬಿಡುಗಡೆಗೊಳಿಸಲು ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಪ್ರಾಣಿಪ್ರಿಯ, ಭಾರತೀಯ ಪ್ರಾಣಿ ಹಕ್ಕುಗಳು ಮತ್ತು ಶಿಕ್ಷಣ ಕೇಂದ್ರದ (ಐಸಿಎಆರ್‌ಎ) ಮುರಳೀಧರನ್‌ ಎಂಬವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್‌ ಅವರಿದ್ದ ಪೀಠವು, ಆನೆ ನೋವು ಸಹಿಸಿಕೊಂಡೇ ಬದುಕುವುದು ಕ್ರೂರ ಸನ್ನಿವೇಶ ಎಂದು ಪಶುವೈದ್ಯರು ವರದಿ ನೀಡಿದರೆ, ಅದನ್ನು ಆಧರಿಸಿ ದಯಾಮರಣಕ್ಕೆ ಅವಕಾಶ ಕಲ್ಪಿಸಬಹುದು ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಹೇಳಿತ್ತು.

ಅದರಂತೆ ಪಶು ವೈದ್ಯರು ಆನೆಯ ಅನಾರೋಗ್ಯದ ತೀವ್ರತೆಯನ್ನು ಮನದಟ್ಟು ಮಾಡುವ ವರದಿ ಸಲ್ಲಿಸಿದ್ದು, ಆನೆಗೆ ದಯಾಮರಣ ಕಲ್ಪಿಸುವ ಪ್ರಕ್ರಿಯೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ದೇಗುಲ ಆಡಳಿತಾಧಿಕಾರಿಗಳು ಮತ್ತು ಪಶು ವೈದ್ಯರು ಮುಂದಾಗಿದ್ದರು.

Comments are closed.