ರಾಷ್ಟ್ರೀಯ

ಸೂರತ್‌ ರೇಪ್‌ ಕೇಸ್‌: ಬಾಲಕಿ ತಮ್ಮ ಮಗಳು ಎಂದ ಆಂಧ್ರ ದಂಪತಿ

Pinterest LinkedIn Tumblr


ಸೂರತ್‌ : ಈಚೆಗಿಲ್ಲಿ ನಡೆದಿದ್ದ ಮತ್ತು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಅಪರಿಚಿತ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್‌ ಪೊಲೀಸರು ಅಹ್ಮದಾಬಾದ್‌ನ ಓರ್ವನನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಸವಾಯ್‌ ಮಾಧೋಪುರ ಜಿಲ್ಲೆಯ ಗಾಂಧಿನಗರದಲ್ಲಿ ಬಂಧಿಸಲ್ಪಟ್ಟಿದ್ದ ಈ ವ್ಯಕ್ತಿಯನ್ನು ಹರ್ಷ್‌ ಸಹಾಯ್‌ ಗುರ್ಜರ್‌ ಎಂದು ಗುರುತಿಸಲಾಗಿದೆ ಎಂದು ಗುಜರಾತ್‌ ಗೃಹ ಸಚಿವ ಪ್ರದೀಪ ಸಿನ್ಹ ಜಡೇಜ ತಿಳಿಸಿದ್ದಾರೆ.

ಮೃತ ಬಾಲಕಿಯ ಶವ ಪತ್ತೆಯಾಗಿದ್ದ ಪಾಂಡೇಸರ ಪ್ರದೇಶದಲ್ಲಿನ ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬಂದಿದ್ದ ಕಪ್ಪು ಕಾರಿನ ಮೂಲವನ್ನು ಹುಡುಕುತ್ತಾ ಹೋದ ಗುಜರಾತ್‌ ಪೊಲೀಸರು ಅಂತಿಮವಾಗಿ ಕಾರು ಮಾಲಕ ರಾಜಸ್ಥಾನದ ಕಲ್ಲು ಗುತ್ತಿಗೆದಾರನನ್ನು ತಲುಪಿದರು. ತನ್ನ ಸಹೋದರ ಕಾರನ್ನು ಗುಜರಾತ್‌ಗೆ ಒಯ್ದಿದ್ದು ಬಹುಷಃ ಆತ ಈ ಕೃತ್ಯದಲ್ಲಿ ಶಾಮೀಲಾಗಿರಬಹುದೆಂದು ಆತ ಕೊಟ್ಟ ಹೇಳಿಕೆಯ ಪ್ರಕಾರ ಶಂಕಿತನನ್ನು ಪೊಲೀಸರು ಬಂಧಿಸಿದರು.

ಮೃತ ಬಾಲಕಿಯ ಎರಡು ಫೋಟೋಗಳನ್ನು ಪೊಲೀಸರು ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್‌ ಮಾಡಿರುವುದನ್ನು ಅನುಸರಿಸಿ ಈ ಮೃತ ಬಾಲಕಿ ಕಳೆದ ವರ್ಷ ನಾಪತ್ತೆಯಾಗಿದ್ದ ತಮ್ಮ ಮಗಳೇ ಇದ್ದಿರಬಹುದೆಂದು ಆಂಧ್ರ ಪ್ರದೇಶದ ದಂಪತಿ ಗುಜರಾತ್‌ ಪೊಲೀಸರನ್ನು ಸಂಪರ್ಕಿಸಿದ್ದಾರೆ.

-ಉದಯವಾಣಿ

Comments are closed.