ಬೆಂಗಳೂರು : ವಿಧಾನಸಭಾ ಚುನಾವಣಾ ಕಾವು ಜೋರಾಗಿರುವ ವೇಳೆಯಲ್ಲೇ ಬೆಂಗಳೂರಿನ ಸಿರಿವಂತ ಪಕ್ಷೇತರ ಅಭ್ಯರ್ಥಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣವಾಗಿರುವುದು ಅವರು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಆಸ್ತಿ ವಿವರ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಡಾ.ಕೆ.ಅನಿಲ್ ಕುಮಾರ್ ಅವರು ಬರೋಬ್ಬರಿ 339 ಕೋಟಿ ಆಸ್ತಿ ಇದೆ ಎಂದು ನಾಮಪತ್ರ ಸಲ್ಲಿಸುವ ವೇಳೆ ವಿವರ ನೀಡಿದ್ದಾರೆ.
ತೀರಾ ನಿರ್ಗತಿಕರಾಗಿದ್ದ ಅನಿಲ್ ಅವರು ಕೇವಲ 3 ನೇ ತರಗತಿ ಓದಿದ್ದು, ಬೆಂಗಳೂರಿನ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟ ಅವರು ಇಷ್ಟು ಆಸ್ತಿಯನ್ನು ಸಂಪಾದಿಸಿದ್ದಾರೆ. ಅವರ ಪತ್ನಿ ಸಂಧ್ಯಾ ಹೆಸರಲ್ಲಿ 50 ಕೋಟಿ 91 ಲಕ್ಷ ಆಸ್ತಿ ಇದೆ ಎಂದು ವಿವರ ನೀಡಿದ್ದಾರೆ.
ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ
ಅನಿಲ್ ಕುಮಾರ್ ಅವರು ಸಾಮಾಜಿಕಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರ ಸಮಾಜ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಕೂಡ ದೊರಕಿದೆ.
-ಉದಯವಾಣಿ
Comments are closed.