ರಾಷ್ಟ್ರೀಯ

ಸೆಕ್ಸ್‌ ಫಾರ್‌ ಡಿಗ್ರಿ: ಆ ಮಹಿಳೆಯ ಪರಿಚಯವಿಲ್ಲ ಎಂದ ತ. ನಾಡು ರಾಜ್ಯಪಾಲ

Pinterest LinkedIn Tumblr

ಚೆನ್ನೈ: ತಮಿಳುನಾಡಿನ ಮದುರೈ ವಿವಿಯಲ್ಲಿ ಬೆಳಕಿಗೆ ಬಂದಿರುವ ‘ಸೆಕ್ಸ್‌ ಫಾರ್‌ ಡಿಗ್ರಿ’ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾಗಿರುವ ಮಹಿಳೆಯ ಪರಿಚಯ ತಮಗಿಲ್ಲ ಎಂದು ತ.ನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಹೇಳಿದ್ದಾರೆ.

ಶೈಕ್ಷಣಿಕ ಮತ್ತು ಆರ್ಥಿಕ ನೆರವು ನೀಡುವ ನೆಪದಲ್ಲಿ ವಿದ್ಯಾರ್ಥಿನಿಯರನ್ನು ವಿವಿಯ ಅಕಾರಿಗಳ ಜತೆ ಕಾಮಕೇಳಿಗೆ ಪುಸಲಾಯಿಸುತ್ತಿದ್ದ ಆರೋಪದ ಮೇಲೆ ದೇವಾಂಗ ಆರ್ಟ್ಸ್ ಕಾಲೇಜಿನ ನಿರ್ಮಲಾ ದೇವಿ (46) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂತ ಮಹಿಳೆ ತನಗೆ ರಾಜ್ಯಪಾಲರ ಪರಿಚಯವಿದೆ ಎಂದು ನೀಡಿರುವ ಹೇಳಿಕೆಯನ್ನು ಬನ್ವರಿಲಾಲ್‌ ತಳ್ಳಿಹಾಕಿದ್ದಾರೆ. ”ನನಗೆ ಮಹಿಳೆಯ ಪರಿಚಯವಿಲ್ಲ. ನನಗೆ ಈ ರಾಜಕೀಯಗಳೆಲ್ಲ ಗೊತ್ತಿಲ್ಲ. ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಲಾಲ್‌ ಹೇಳಿದ್ದಾರೆ.

ಪ್ರತಿಷ್ಠಿತ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕಿಯಾಗಿರುವ ಆರೋಪಿ ನಿರ್ಮಲಾ ದೇವಿ ಅವರನ್ನು ಹಗರಣ ಬಯಲಾಗಿ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

Comments are closed.