ರಾಷ್ಟ್ರೀಯ

ಅಮೇಥಿ 15 ವರ್ಷದೊಳಗೆ ಕ್ಯಾಲಿಫೋರ್ನಿಯಾ,ಸಿಂಗಪುರ್‌ಗೆ ಸಮನಾಗಲಿದೆ!

Pinterest LinkedIn Tumblr


ಅಮೇಥಿ: ‘ನನ್ನ ಕ್ಷೇತ್ರ ಅಮೇಥಿಯಲ್ಲಿ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿಶ್ವದರ್ಜೆಯ ಶೈಕ್ಷಣಿಕ ತಾಣವನ್ನಾಗಿಸುತ್ತೇನೆ’ಎಂದು ಮಂಗಳವಾರ ರಾಹುಲ್‌ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ‘ಮುಂದಿನ 15 ವರ್ಷಗಳ ಒಳಗೆ ಅಮೇಥಿ ಸಿಂಗಪುರ್‌, ಕ್ಯಾಲಿಫೋರ್ನಿಯಾದಂತೆ ಆಗಲಿದೆ. ಜನರು ಈಗ ಹೇಗೆ ಸಿಂಗಪುರ, ಕ್ಯಾಲಿಫೋರ್ನಿಯಾದ ಹೆಸರು ಹೇಳುತ್ತಾರೋ ಅದರೊಂದಿಗೆ ಅಮೇಥಿಯ ಹೆಸರನ್ನು ಖಂಡಿತವಾಗಿಯೂ ಸೇರಿಸುತ್ತಾರೆ’ ಎಂದರು.

ಸೋಮವಾರದಿಂದ ಮೂರು ದಿನಗಳ ಕಾಲ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್‌ ಭಾಗಿಯಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಕಾಶ ಸಿಕ್ಕಲ್ಲೆಲ್ಲಾ ಆಕ್ರೋಶ ಹೊರ ಹಾಕುತ್ತಿದ್ದಾರೆ.

-ಉದಯವಾಣಿ

Comments are closed.