ರಾಷ್ಟ್ರೀಯ

ಯೂಟ್ಯೂಬ್‌ನಿಂದ ಈ ವ್ಯಕ್ತಿ 40 ವರ್ಷ ಬಳಿಕ ಮನೆ ಸೇರಿದ

Pinterest LinkedIn Tumblr


ಫೇಸ್‌ಬುಕ್‌, ಯೂಟ್ಯೂಬ್‌ ಎಲ್ಲಾ ಸುಮ್ಮನೇ ಸಮಯ ಕಳೆಯಲು ಎಂದು ದೂರುವುದನ್ನು ಬಿಟ್ಟು ಅವುಗಳಿಂದಾಗುವ ಉತ್ತಮ ಕೆಲಸಗಳ ಕಡೆಯೂ ಗಮನ ಹರಿಸಿದರೆ ನಮಗೆ ಎಷ್ಟೆಲ್ಲಾ ಮಹತ್ತರ ವಿಷಯಗಳು ಕಾಣಸಿಗುತ್ತವೆ. ಈ ಮಾತನ್ನು ಹೇಳಲು ಕಾರಣವೇನೆಂದರೆ, 40 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಯೂಟ್ಯೂಬ್‌ ವಿಡಿಯೋ ಸಹಾಯದಿಂದ ತನ್ನ ಕುಟುಂಬವನ್ನು ಸೇರಿದ್ದಾರೆ.

ಮಣಿಪುರದ ಖೋಮ್‌ದನ್‌ ಸಿಂಗ್‌ 1978ರಲ್ಲಿ ತನ್ನ ಕುಟುಂಬದವರ ಜೊತೆ ಮುನಿಸಿಕೊಂಡು ಮನೆಬಿಟ್ಟು ಹೋಗಿದ್ದರು. ಅವರನ್ನು ಅವರ ಕುಟುಂಬದವರು ಹುಡುಕದ ಜಾಗವೇ ಇರಲಿಲ್ಲ. ಅವರನ್ನು ಕುಟುಂಬ ಈಗ ಯೂಟ್ಯೂಬ್‌ ವಿಡಿಯೋ ಸಹಾಯದಿಂದ ಹುಡುಕಿದೆ.

ಮುಂಬೈನ ಬೀದಿಗಳಲ್ಲಿ ಖೋಮ್‌ದನ್‌ ಹಾಡುತ್ತಿದ್ದುದನ್ನುಫೋಟೊಗ್ರಾಫ‌ರ್‌ ಫಿರೋಜ್‌ ಶಕೀರ್‌ ಚಿತ್ರೀಕರಿಸಿದ್ದರು. ಆ ವಿಡಿಯೋದಲ್ಲಿ ತಮ್ಮ ಗುರುತನ್ನು ಹೇಳಿದ್ದರು. ಇದನ್ನು ನೋಡಿದ ಖೋಮ್‌ದನ್‌ರ ನೆರೆಯವರಿಗೆ ಅನುಮಾನ ಬಂದು ಖೋಮ್‌ದನ್‌ರ ಕುಟುಂಬದವರಿಗೆ ತಿಳಿಸಿದರು. ಅವರ ಹಳೇ ಫೋಟೋವನ್ನು ಮುಂಬೈ ಪೊಲೀಸರಿಗೆ ನೀಡಿದ್ದು, ಕಡೆಗೂ ಅವರನ್ನು ಮನೆಗೆ ಕರೆತಂದಿದ್ದಾರೆ.

-ಉದಯವಾಣಿ

Comments are closed.