ಕರ್ನಾಟಕ

15 ವರ್ಷದಿಂದ ಶಾಸಕರಾಗಿ ಏನು ಅಭಿವೃದ್ದಿ ಮಾಡಿದ್ದೀರಿ?…ಸಿ.ಟಿ.ರವಿ ವಿರುದ್ಧ ಗ್ರಾಮಸ್ಥರ ಆಕ್ರೋಶ

Pinterest LinkedIn Tumblr


ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಡ ರಾತ್ರಿ ಗ್ರಾಮಸ್ಥರನ್ನು ಭೇಟಿ ಮಾಡಲು ಹೋದಾಗ ಈ ಘಟನೆ ನಡೆದಿದೆ.

15 ವರ್ಷದಿಂದ ಶಾಸಕರಾಗಿ ಏನು ಅಭಿವೃದ್ದಿ ಮಾಡಿದ್ದೀರಿ?… ಚುನಾವಣೆ ವೇಳೆ ಮಾತ್ರ ಕ್ಷೇತ್ರದ ಗ್ರಾಮಗಳು ನೆನಪಿಗೆ ಬರುವುದಾ ನಿಮಗೆ?…ನೀವು ಅಭಿವೃದ್ಧಿ ಮಾಡುವಿರಿ ಎಂದು ನಂಬಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ನಿಮಗೆ ಮತ ನೀಡಿದ್ದೇವೆ. ಆದರೆ, ನೀವು ಗ್ರಾಮದ ಅಭಿವೃದ್ದಿಯತ್ತ ಗಮನವೇ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಗ್ರಾಮಸ್ಥರ ಪ್ರಶ್ನೆಗೆ ಉತ್ತರ ನೀಡಲು ವಿಫಲರಾದ ಸಿ.ಟಿ.ರವಿ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ಸ ತೆರಳಿರುವ ಘಟನೆ ನಡೆದಿದೆ.

Comments are closed.