ರಾಷ್ಟ್ರೀಯ

ಸೊಳ್ಳೆ ಬಗ್ಗೆ ದೂರು ನೀಡಿದ ಬೆಂಗಳೂರು ವೈದ್ಯನನ್ನು ವಿಮಾನದಿಂದ ಇಳಿಸಿದ ಇಂಡಿಗೋ

Pinterest LinkedIn Tumblr


ಲಕ್ನೋ: ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ. ಸೌರಭ್‌ ರೈ ಇಂಡಿಗೋ ವಿಮಾನದ ಒಳಗಡೆ ಸೊಳ್ಳೆ ಇದೆ ಎಂದು ದೂರು ನೀಡಿದ್ದಕ್ಕೆ ಅವರನ್ನು ವಿಮಾನದಿಂದ ಇಳಿಸಿರುವ ಘಟನೆ ನಡೆದಿದೆ.

‘ಡಾ. ಸೌರಭ್‌ ರೈ ವಿಮಾನದ ಸಿಬ್ಬಂದಿ ಜತೆ ಜೋರು ದನಿಯಲ್ಲಿ ಮಾತನಾಡಿದರು, ಅಲ್ಲದೆ ‘ಹೈಜಾಕ್‌’ನಂಥ ಪದಗಳನ್ನು ಬಳಸಿದರು, ವಿಮಾನದ ಸುರಕ್ಷಿತಾ ನಿಯಮಗಳ ಪ್ರಕಾರ ಅವರನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು’ ಎಂದು ಇಂಡಿಗೋ ಹೇಳಿದೆ.

ಡಾ. ರೈ ಸೋಮವಾರ ಬೆಳಗ್ಗೆ 6 ಗಂಟೆಗೆ ವಿಮಾನ ಹತ್ತಿದರು. ಹತ್ತಿದ ತಕ್ಷಣವೇ ಅವರು ವಿಮಾನದಲ್ಲಿ ಸೊಳ್ಳೆ ಇದೆ ಎಂದು ಸಿಬ್ಬಂದಿ ಬಳಿ ಹೇಳಿ, ಈ ಕುರಿತು ಪ್ರಯಾಣಿಕರಿಗೆ ತಿಳಿಸುವಂತೆ ವಿಮಾನ ಸಿಬ್ಬಂದಿಯವರ ಬಳಿ ಹೇಳುತ್ತಾರೆ , ಆಗ ಸಿಬ್ಬಂದಿ ಅವರನ್ನು ಸುಮ್ಮನೆ ಕೂರುವಂತೆ ಹೇಳಿದ್ದಾರೆ.

ಸಿಬ್ಬಂದಿಯವರು ಇವರ ದೂರಿಗೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದಾಗ ಕೋಪಗೊಂಡ ರೈ ಸಿಬ್ಬಂದಿ ಜತೆ ವಾಗ್ವಾದ ಮಾಡಲಾರಂಭಿಸಿದಾಗ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಅವರು ರನ್‌ವೇಯಿಂದ ಟರ್ಮಿನಲ್‌ಗೆ ನಡೆದುಕೊಂಡೇ ಬರಬೇಕಾಯಿತು ಎಂದು ವರದಿ ತಿಳಿಸಿದೆ.

ಹೊಸ ದಿಲ್ಲಿಯಲ್ಲಿ ಇಂಡಿಗೋ ಸಿಬ್ಬಂದಿ ಪ್ರಯಾಣಿಕರೊಬ್ಬರಿಗೆ ಥಳಿಸಿದ ಘಟನೆ ಕಳೆದ ತಿಂಗಳಷ್ಟೇ ವರದಿಯಾಗಿತ್ತು.

Comments are closed.